ನವದೆಹಲಿ, ಮಾ.18 (DaijiworldNews/PY): "ತೆಲಂಗಾಣ, ಆಂಧ್ರಪ್ರದೇಶದಲ್ಲಿ ಶೇ.10ಕ್ಕೂ ಹೆಚ್ಚು ಕೊರೊನಾ ಲಸಿಕೆ ವ್ಯರ್ಥವಾಗುತ್ತಿದೆ. ಉತ್ತರಪ್ರದೇಶದಲ್ಲಿ ಕೂಡಾ ಬಹುತೇಕ ಕೊರೊನಾ ಲಸಿಕೆ ವ್ಯರ್ಥವಾಗುತ್ತಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಎಲ್ಲಾ ರಾಜ್ಯಗಳ ಸಿಎಂಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, "ಲಸಿಕೆ ಏಕೆ ವ್ಯರ್ಥವಾಗುತ್ತಿದೆ ಎಂದು ರಾಜ್ಯಗಳು ಪರಿಶೀಲನೆ ಮಾಡಬೇಕು. ಈ ಬಗ್ಗೆ ರಾಜ್ಯಗಳಲ್ಲಿ ಪರಿಶೀಲನೆ ಮಾಡಬೇಕು. ಪ್ರತೀ ಸಂಜೆ ಮಾನಿಟರಿಂಗ್ ಮಾಡಬೇಕು" ಎಂದು ತಿಳಿಸಿದ್ದಾರೆ.
"ಕೊರೊನಾ ಲಸಿಕೆ ವ್ಯರ್ಥ ಮಾಡುವುದನ್ನು ಕಡಿಮೆ ಮಾಡಲು ಸ್ಥಳೀಯ ಮಟ್ಟದಲ್ಲಿ ಯೋಜನೆ ಹಾಗೂ ಆಡಳಿತ ನ್ಯೂನತೆಗಳನ್ನು ಕೂಡಲೇ ಸರಿಪಡಿಸಿಕೊಳ್ಳಬೇಕು" ಎಂದಿದ್ದಾರೆ.
"ನಾನು ಕೊರೊನಾ ಎರಡನೇ ಅಲೆಯನ್ನು ನಿಯಂತ್ರಿಸದಿದ್ದಲ್ಲಿ ಮುಂದೆ ದೊಡ್ಡ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ನಾವು ಇದಕ್ಕೆ ತ್ವರಿತ ಹಾಗೂ ನಿರ್ಣಾಯಕವಾದ ಕ್ರಮವನ್ನು ತೆಗೆದುಕೊಳ್ಳಬೇಕಾಗುತ್ತದೆ" ಎಂದು ಎಚ್ಚರಿಸಿದ್ದಾರೆ.
"ಕೆಲವು ಪ್ರದೇಶಗಳಲ್ಲಿ ಏಕೆ ಕೊರೊನಾ ಪರೀಕ್ಷೆ ಸಂಖ್ಯೆ ಕಡಿಮೆ ಇದೆ. ಈ ಪ್ರದೇಶಗಳಲ್ಲಿ ಏಕೆ ಕಡಿಮೆ ಲಸಿಕೆ ಇದೆ?. ನಮ್ಮ ಯಶಸ್ಸು ನಿರ್ಲಕ್ಷ್ಯದ ಕಡೆಗೆ ತಿರುಗಬಾರದು" ಎಂದಿದ್ದಾರೆ.