ಬೆಂಗಳೂರು, ಮಾ.18 (DaijiworldNews/HR): ಇತ್ತೀಚೆಗೆ ಕಾಂಗ್ರೆಸ್ ನಡೆಸಿದ ಶಿವಮೊಗ್ಗ ಚಲೋ ಜಾಥಾದ ಹಿಂದೆ ಕೆಪಿಸಿಸಿಯ ಅಘೋಷಿತ ಅಧ್ಯಕ್ಷೆ ಮಹಾನಾಯಕಿಯ ಕೈವಾಡವಿದೆ ಎಂದು ಕರ್ನಾಟಕದ ಬಿಜೆಪಿ ಹೇಳಿದೆ.
ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕದ ಬಿಜೆಪಿ, "ಇತ್ತೀಚೆಗೆ ಕರ್ನಾಟಕ ಕಾಂಗ್ರೆಸ್ ನಡೆಸಿದ ಶಿವಮೊಗ್ಗ ಚಲೋ ಜಾಥಾದ ಹಿಂದೆ ಕೆಪಿಸಿಸಿಯ ಅಘೋಷಿತ ಅಧ್ಯಕ್ಷೆ ಮಹಾನಾಯಕಿಯ ಕೈವಾಡವಿದ್ದು, ಮಹಾನಾಯಕನೊಬ್ಬರು ಅಘೋಷಿತ ಅಧ್ಯಕ್ಷೆಯ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ" ಎಂದಿದೆ.
ಇನ್ನು ಬೀಗ-ಬೀಗತಿ ಸಂಬಂಧಕ್ಕಾಗಿ ಶಿವಮೊಗ್ಗ ಚಲೋ ಮಾಡಿದ ಕಾಂಗ್ರೆಸ್, ಜನತೆಗೆ ತಪ್ಪು ಮಾಹಿತಿ ನೀಡಿ, ಸದನದ ಸಮಯ ವ್ಯರ್ಥ ಮಾಡಿತ್ತು ಎಂದು ಬಿಜೆಪಿ ಟ್ವೀಟ್ ಮಾಡಿದೆ.