ಬೆಂಗಳೂರು, ಮಾ.18 (DaijiworldNews/MB) : ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಉನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಅಖಿಲ ಭಾರತೀಯ ಪ್ರತಿಧಿ ಸಭೆ (ಎಬಿಪಿಎಸ್) ಜನವರಿ 19 ರಿಂದ ಬೆಂಗಳೂರಿನಲ್ಲಿ ಎರಡು ದಿನಗಳವರೆಗೆ ನಡೆಯಲಿದೆ. ದೇಶದಲ್ಲಿ ಆರ್ಎಸ್ಎಸ್ ಸಂಘ ಕಾರ್ಯಗಳನ್ನು ವಿಸ್ತರಿಸುವ ಬಗ್ಗೆ ಇಲ್ಲಿ ಚರ್ಚೆ ನಡೆಯಲಿದೆ ಎಂದು ಅಖಿಲ ಭಾರತೀಯ ಪ್ರಚಾರ ಪ್ರಮುಖರಾದ ಅರುಣ್ ಕುಮಾರ್ ಬುಧವಾರ ಇಲ್ಲಿ ಹೇಳಿದರು.
ಇಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕುಮಾರ್, ಸಾಂಸ್ಕೃತಿಕ ಮತ್ತು ಸಾಮಾಜಿಕ ವಿಷಯಗಳ ಬಗ್ಗೆ ಚರ್ಚಿಸುವುದರ ಜೊತೆಗೆ ಎಬಿಪಿಎಸ್ ಜನರೊಂದಿಗೆ ಸಂಪರ್ಕ ಹೊಂದು ಬಗ್ಗೆ ಅಧಿಕ ಗಮನಹರಿಸುವ ಬಗ್ಗೆ ಚರ್ಚಿಸಲಿದೆ ಎಂದು ತಿಳಿಸಿದರು.
ದೇಶದಲ್ಲಿ ಸಂಘ ಕಾರ್ಯಗಳನ್ನು ವಿಸ್ತರಿಸುವ ಬಗ್ಗೆ ಎಬಿಪಿಎಸ್ ಚರ್ಚಿಸಲಿದೆ. ಎಬಿಪಿಎಸ್ ಕಳೆದ ಮೂರು ವರ್ಷಗಳಲ್ಲಿ ಮಾಡಿದ ಕಾರ್ಯಗಳನ್ನು ಪರಿಶೀಲಿಸುತ್ತದೆ. ಮುಂದಿನ ಮೂರು ವರ್ಷಗಳಲ್ಲಿ ಮಾಡಬೇಕಾದ ಕಾರ್ಯಗಳ ದೃಷ್ಟಿಕೋನ ಈಗಲೇ ರಚಿಸಲಿದೆ ಎಂದರು.
ಸಾಂಕ್ರಾಮಿಕ ಸಮಯದಲ್ಲಿ ಆರ್ಎಸ್ಎಸ್ ಮಾಡಿದ ಕಾರ್ಯಗಳ ಬಗ್ಗೆ ಮಾತನಾಡಿದ ಅವರು, ಸಮಾಜದ ಜನರಿಗೆ ಅವರದ್ದೇ ಹಾದಿಯಲ್ಲಿ ಸಹಾಯ ಮಾಡಿದವರು ನಮ್ಮ ಸಂಘದ ಸಂಪರ್ಕಕ್ಕೆ ಬಂದಿದ್ದಾರೆ ಎಂದು ಹೇಳಿದರು.
ಸಾಮಾನ್ಯವಾಗಿ 1,500 ಪ್ರತಿನಿಧಿಗಳು ವಾರ್ಷಿಕ ಎಬಿಪಿಎಸ್ ಸಭೆಯಲ್ಲಿ ಭಾಗವಹಿಸುತ್ತಾರೆ. ಆದರೆ ಚಾಲ್ತಿಯಲ್ಲಿರುವ ಸಾಂಕ್ರಾಮಿಕ ರೋಗದಿಂದಾಗಿ, ಕೇವಲ 450 ಪ್ರತಿನಿಧಿಗಳು ಬೆಂಗಳೂರಿನಲ್ಲಿ ಹಾಜರಾಗಿದ್ದಾರೆ. ಉಳಿದವರು ದೇಶಾದ್ಯಂತ 44 ಪ್ರಾಂತ್ಗಳಲ್ಲಿ (ಆರ್ಎಸ್ಎಸ್ನ ಕಾರ್ಯ ಘಟಕಗಳಲ್ಲಿ) ಸ್ಥಾಪಿಸಲಾದ ಆನ್ಲೈನ್ ಸೌಲಭ್ಯದ ಮೂಲಕ ಭಾಗವಹಿಸಲಿದ್ದಾರೆ ಎಂದು ಕುಮಾರ್ ಹೇಳಿದರು.
ಅಖಿಲ್ ಭಾರತೀಯ ಕಾರ್ಯಕರ್ ಮಂಡಲ್ ಈಗಾಗಲೇ ಪ್ರಾರಂಭವಾಗಿದ್ದು, ಇದು ಗುರುವಾರ (ಮಾರ್ಚ್ 18) ಮುಕ್ತಾಯಗೊಳ್ಳಲಿದೆ. ಎಬಿಪಿಎಸ್ನ ಕಾರ್ಯಸೂಚಿಯೊಂದಿಗೆ ನಿರ್ಣಯಗಳನ್ನು ಅಂತಿಮಗೊಳಿಸಲಾಗುವುದು ಎಂದು ಹೇಳಿದರು.
ಅಖಿಲ ಭಾರತೀಯ ಸಹಾ ಪ್ರಚಾರ ಪ್ರಮುಖ್ ಆದ ನರೇಂದ್ರ ಠಾಕೂರ್, ಸುನೀಲ್ ಅಂಬೇಕರ್, ದಕ್ಷಿಣ ಕ್ಷೇತ್ರ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣಕ್ಷೇತ್ರಿಯ ಕಾರ್ಯವಾಹ್ ನಾ. ತಿಪ್ಪೇಶಸ್ವಾಮಿ ಹಾಗೂ ಕರ್ನಾಟಕ ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖ್ ಪ್ರದೀಪ್ ಉಪಸ್ಥಿತರಿದ್ದರು.