ನವದೆಹಲಿ, ಮಾ18 (DaijiworldNews/MS): ಇಟಾಲಿಯನ್ ಐಷಾರಾಮಿ ಬ್ರಾಂಡ್ ಬೊಟ್ಟೆಗಾ ವೆನೆಟಾ ಈಗ ವೈರಲ್ ಆಗುತ್ತಿದೆ. ನೆಟ್ಟಿಗರು ಈ ಬ್ರ್ಯಾಂಡ್ ತಯಾರಿಸಿದ ಅಭರಣವನ್ನು ಸಖತ್ ಟ್ರೋಲ್ ಮಾಡುತ್ತಿದ್ದಾರೆ. ಹೊಸದಾಗಿ ಮಾರುಕಟ್ಟೆಗೆ ಪರಿಚಯಿಸಿರುವ ನೂತನ ಅಭರಣ ಇದಕ್ಕೆಲ್ಲದಕ್ಕೂ ಕಾರಣವಾಗಿದೆ.
ಈ ಐಷಾರಾಮಿ ಬ್ರ್ಯಾಂಡ್ ಟೆಲಿಫೋನ್ ನ ವೈರ್ ನ್ನು ಹೋಲುವ ಹಾರವನ್ನು ಮಾರಾಟ ಮಾಡುತ್ತಿದೆ. ಈ ನೆಕ್ಲೇಸ್ ನಾವು ಹಿಂದಿನ ದಿನದಲ್ಲಿ ಬಳಸಿದ ಹಳೆಯ ಕ್ಲಾಸಿಕ್ ಲ್ಯಾಂಡ್ಲೈನ್ ಟೆಲಿಫೋನ್ ಸುರುಳಿಬಳ್ಳಿಯಂತೆ ಕಾಣುತ್ತವೆ, , ಈ ಹಾರ ಮತ್ತು ಕಿವಿಯೋಲೆಗಳು 2,000 ಡಾಲರ್ (1,45,189 ರೂ.) ಮೌಲ್ಯದ್ದಾಗಿದೆ.
ಆದರೆ ಬ್ರಾಂಡ್ ಬೊಟ್ಟೆಗಾ ವೆನೆಟಾ 'ನೆಕ್ಲೆಸ್' ಅನ್ನು ಎನಾಮೆಲ್ಡ್ ಸ್ಟರ್ಲಿಂಗ್ ಬೆಳ್ಳಿಯಿಂದ ತಯಾರಿಸಲಾಗಿದೆ. ನಿಮ್ಮ ಉಡುಪಿಗೆ ತಕ್ಕಂತೆ ಹಸಿರು, ನೀಲಿ ಮತ್ತು ಬಿಳಿ ಬಣ್ಣದ ಆಯ್ಕೆಗಳು ಲಭ್ಯವಿದೆ ಎಂದಿದೆ. ಆದರೆ ನೆಟ್ಟ್ರಿಗರು ಮಾತ್ರ ವಿವಿಧ ರೀತಿಯ ಪ್ರತಿಕ್ರಿಯೆಗಳು ನೀಡಲಾರಂಭಿಸಿದ್ದಾರೆ.
ಈ ಹಾರವು ಜಪಾನ್ನ ಬ್ರ್ಯಾಂಡ್ನ ಆನ್ಲೈನ್ ಅಂಗಡಿಯಿಂದ ಪ್ರಿ -ಆರ್ಡರ್ ಮಾಡಿದ್ರೆ ಮಾತ್ರ ಲಭ್ಯವಿದೆ. ಇದರಲ್ಲೇ ಹೊಸದಾಗಿ ಪ್ರಾರಂಭಿಸಲಾದ ಶ್ರೇಣಿಯಲ್ಲಿ ಕಿವಿಯೋಲೆಗಳು ಮತ್ತು ಉಂಗುರವನ್ನು ಸಹ ಒಳಗೊಂಡಿದೆ ಎಂದು ಹೇಳಿದೆ. ಆದರೆ ನೆಟ್ಟ್ರಿಗರು ಮಾತ್ರ ಇದನ್ನು ವ್ಯಂಗ್ಯವಾಗಿ ಟ್ರೋಲ್ ಮಾಡುತ್ತಿದ್ದಾರೆ.