ಬೆಂಗಳೂರು, ಮಾ. 17 (DaijiworldNews/SM): ಮುಖ್ಯಮಂತ್ರಿ ಬಿ ಎಸ್ ಯಡಿಯುರಪ್ಪ ಅವರು ಕೋವಿಡ್ -19 ಹೆಚ್ಚಳವನ್ನು ತಡೆಯಲು ನಿರ್ಬಂಧಗಳನ್ನು ಘೋಷಿಸಿರುವ ಖಾಸಗಿ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗಿದ್ದ ಹಳೆಯ ವಿಡಿಯೋ ತುಣುಕು ಇದೀಗ ವೈರಲ್ ಆಗುತ್ತಿದೆ. ಸಾರ್ವಜನಿಕರಲ್ಲಿ ಗೊಂದಲ ಸೃಷ್ಠಿಸಿದೆ. ಮಾರ್ಚ್ 2020 ರಲ್ಲಿ ಸಿಎಂ ಘೊಷಿಸಿದ ನಿರ್ಬಂಧಗಳನ್ನು ಕಿಡಿಗೇಡಿಗಳು ಇದೀಗ ವೈರಲ್ ಮಾಡುತ್ತಿದ್ದಾರೆ.
ಒಂದು ವಾರದವರೆಗೆ ಮಾಲ್ಗಳು, ಸಿನೆಮಾ ಚಿತ್ರಮಂದಿರಗಳು, ಪಬ್ಗಳು ಮತ್ತು ನೈಟ್ಕ್ಲಬ್ಗಳು, ಪ್ರದರ್ಶನಗಳು, ಬೇಸಿಗೆ ಶಿಬಿರಗಳು, ಈಜುಕೊಳಗಳು, ಕ್ರೀಡಾ ಕಾರ್ಯಕ್ರಮಗಳು, ಮದುವೆ, ಸಮಾವೇಶಗಳು, ಪಾರ್ಟಿಗಳನ್ನು ನಿಷೇಧಿಸಲಾಗುವುದು ಎಂದು ಸಿಎಂ ಯಡಿಯೂರಪ್ಪ ಪತ್ರಿಕಾಗೋಷ್ಠಿಯಲ್ಲಿ ಘೋಷಿಸುವುದರೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ. ಈ ವೀಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಕಿಡಿಗೇಡಿಗಳು ವೈರಲ್ ಮಾಡಲಾರಂಭಿಸಿದ್ದಾರೆ.
ಕೋವಿಡ್ ಸೋಂಕಿನಿಂದ ಕಲಬುರಗಿಯ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ ಮತ್ತು ಅವರು 46 ಜನರೊಂದಿಗೆ ಸಂಪರ್ಕಕ್ಕೆ ಬಂದಿದ್ದಾರೆ ಮತ್ತು ಅವರೊಂದಿಗೆ 36 ಕ್ಕೂ ಹೆಚ್ಚು ಜನರು ನೇರ ಸಂಪರ್ಕದಲ್ಲಿದ್ದಾರೆ ಎಂದು ಯಡಿಯೂರಪ್ಪ ವೀಡಿಯೊದಲ್ಲಿ ತಿಳಿಸಿದ್ದಾರೆ. ಈ ಮಾಹಿತಿಯು ರಾಜ್ಯದಲ್ಲಿ ಸೋಂಕಿನ ಆರಂಭಿಕ ದಿನಗಳನ್ನು ವರದಿಯಾಗಿರುವ ವಿಚಾರವಾಗಿದ್ದು, ಜನರು ಆತಂಕಗೊಳ್ಳುವ ಅವಶ್ಯಕತೆ ಇಲ್ಲ.
ಇನ್ನು ಈಗಾಗಲೇ ರಾಝ್ಯದಲ್ಲಿ ಯಾವುದೇ ಲಾಕ್ ಡೌನ್, ನೈಟ್ ಕರ್ಫ್ಯೂ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇದೀಗ ಘೋಷಣೆ ಮಾಡಿದ್ದಾರೆ.