ಚಂಡೀಗಢ, ಮಾ.17 (DaijiworldNews/MB) : ಕಬ್ಬಡಿ ಆಟದಲ್ಲಿ ಸೋತೆನೆಂದು ನಿರಾಶೆಗೊಂಡು ಖ್ಯಾತ ಕುಸ್ತಿಪಟು ಬಬಿತಾ ಫೋಗಟ್ ಅವರ ಸೋದರ ಸಂಬಂಧಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಹರಿಯಾಣದ ಬಲಾಲಿ ಗ್ರಾಮದಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ಯುವತಿಯನ್ನು ರಿತಿಕಾ ಎಂದು ಹೇಳಲಾಗಿದೆ.
ರಿತಿಕಾ ರಾಜಸ್ಥಾನದ ಭರತ್ಪುರದ ಲೋಹಗರ್ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ಉಪ ಜೂನಿಯರ್, ಕಿರಿಯ ಮಹಿಳೆಯರು ಮತ್ತು ಪುರುಷರ ಕಬ್ಬಡಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಳು. ಮಾರ್ಚ್ 12ರಿಂದ 14ರವರೆಗೆ ಕಬ್ಬಡಿ ಪಂದ್ಯಾವಳಿ ನಡೆದಿದ್ದು ಅಂತಿಮ ಪಂದ್ಯದಲ್ಲಿ ರಿತಿಕಾಳ ತಂಡ ಕೇವಲ ಒಂದು ಅಂಕದಿಂದ ಸೋತಿತ್ತು. ಇದರಿಂದಾಗಿ ನಿರಾಶೆಗೊಂಡ ರಿತಿಕಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವರದಿಯಾಗಿದೆ.