ಜಮ್ಮು, ಮಾ.17 (DaijiworldNews/PY): ಜಮ್ಮು-ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತರಾಷ್ಟ್ರೀಯ ಗಡಿಯಲ್ಲಿ ಬಿಎಸ್ಎಫ್ ಯೋಧರು ಪಾಕಿಸ್ತಾನ ನುಸುಳುಕೋರರು ಸದೆಬಡೆದಿದ್ದಾರೆ.
ಸಾಂದರ್ಭಿಕ ಚಿತ್ರ
"ರಾಮಘಡ ಸೆಕ್ಟರ್ನ ಮಲ್ಲುಚಕ್ ಬಾರ್ಡರ್ನ ಔಟರ್ ಪೋಸ್ಟ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಕಳೆದ ವರ್ಷ ನವೆಂಬರ್ ತಿಂಗಳಿನಿಂದ ಈವರೆಗೆ ಈ ರೀತಿಯಾದ ಮೂರನೇ ಘಟನೆ ನಡೆದಿದೆ" ಎಂದು ಬಿಎಸ್ಎಫ್ ವಕ್ತಾರರು ತಿಳಿಸಿದ್ದಾರೆ.
ವ್ಯಕ್ತಿಯೋರ್ವ ಪಾಕಿಸ್ತಾನನ ಲೆಹ್ರಿ ಕಲನ್ ಗ್ರಾಮದಿಂದ ಆಕ್ರಮಣಕಾರಿಯಾಗಿ ಚಲಿಸುತ್ತಾ ಬಂದಿದ್ದು, ಬಳಿಕ ಅಂತರಾಷ್ಟ್ರೀಯ ಗಡಿ ಬೇಲಿಯನ್ನು ದಾಟಿ ಭಾರತೀಯ ಭೂಪ್ರದೇಶಕ್ಕೆ ಪ್ರವೇಶ ಮಾಡಿದ್ದರು. ಈ ವೇಳೆ ಬಿಎಸ್ಎಫ್ ಯೋಧರು ವ್ಯಕ್ತಿಯನ್ನು ಪತ್ತೆಹಚ್ಚಿದ್ದು, ಆತನಿಗೆ ಎಚ್ಚರಿಕೆ ನೀಡಿದ್ದಾರೆ. ಆದರೆ, ವ್ಯಕ್ತಿ ಪರಾರಿಯಾಗಲು ಪ್ರಯತ್ನಿಸಿದ್ದು, ಈ ಸಂದರ್ಭ ಯೋಧರು ಗುಂಡು ಹಾರಿಸಿದ್ದಾರೆ.
ಹತ್ಯೆಯಾದ ವ್ಯಕ್ತಿಯ ಜೇಬಿನಲ್ಲಿ ಪಾಕಿಸ್ತಾನ ಕರೆನ್ಸಿಯ 200 ರೂ. ನೋಟು ಪತ್ತೆಯಾಗಿದ್ದು, ಆ ವ್ಯಕ್ತಿ ಮಾನಸಿಕ ಅಸ್ವಸ್ಥ ಎಂದು ತಿಳಿದುಬಂದಿದೆ.
ಆತನ ಮೃತದೇಹವನ್ನು ಮರಣೋತ್ತರ ಪರೀಕ್ಷೆಯ ನಂತರ ಫ್ಯಾಗ್ ಮೀಟಿಂಗ್ನಲ್ಲಿ ಪಾಕಿಸ್ತಾನ ರೇಜರ್ಗಳಿಗೆ ಹಸ್ತಾಂತರಿಸುವ ಸಾಧ್ಯತೆ ಇದೆ.