ನವದೆಹಲಿ ಮಾ 17 (DaijiworldNews/MS): ಭಾರತೀಯ ವಾಯುಪಡೆ (ಐಎಎಫ್)ನ ಮಿಗ್-21 ಬೈಷನ್ ವಿಮಾನ ಅಪಘಾತಕ್ಕೀಡಾಗಿ, ಅದರಲ್ಲಿದ್ದಂತ ಓರ್ವ ಪೈಲೆಟ್ ಮೃತಪಟ್ಟಿರುವ ಘಟನೆ ಮಧ್ಯ ಭಾರತದ ವಾಯುನೆಲೆಯಲ್ಲಿ ನಡೆದಿದೆ.
ಇಂದು ಬೆಳಿಗ್ಗೆ, ಮಧ್ಯ ಭಾರತದ ವಾಯುನೆಲೆಯಲ್ಲಿ ಯುದ್ಧ ತರಬೇತಿ ಕಾರ್ಯಾಚರಣೆಗೆ ಹೊರಟಿದ್ದಾಗ. ಮಿಗ್-21 ಯುದ್ಧ ವಿಮಾನ ದುರಂತ ಅಪಘಾತದಲ್ಲಿ ಪರಿಣಾಮ, ಓರ್ವ ಪೈಲೆಟ್ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.
ಈ ಕುರಿತಂತೆ ಎಐಎಫ್ ಟ್ವಿಟ್ ಮಾಡಿದ್ದು, ಈ ದುರಂತ ಘಟನೆಯಲ್ಲಿ ಐಎಎಫ್ ಗ್ರೂಪ್ ಕ್ಯಾಪ್ಟನ್ ಎ.ಗುಪ್ತಾ ಅವರನ್ನು ಕಳೆದುಕೊಂಡಿದೆ. ಐಎಎಫ್ ಸಂತಾಪ ವ್ಯಕ್ತಪಡಿಸಿದ್ದು,ಅಪಘಾತಕ್ಕೆ ಕಾರಣವೇನೆಂಬುದನ್ನು ಪತ್ತೆ ಹಚ್ಚಲು ವಿಚಾರಣಾ ನ್ಯಾಯಾಲಯ ರಚಿಸಲಾಗಿದೆ ಎಂಬುದಾಗಿ ತಿಳಿಸಿದೆ.