ಬೆಂಗಳೂರು, ಮಾ.17 (DaijiworldNews/PY): ಅಕ್ರಮ ಡ್ರಗ್ಸ್ ಮಾರಾಟದ ಆರೋಪದಡಿ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಬಂಧಿತರನ್ನು ನೈಜೀರಿಯಾದ ಪ್ರಜೆಗಳು ಎಂದು ಗುರುತಿಸಲಾಗಿದೆ.
"ಖಚಿತ ಮಾಹಿತಿಯ ಮೇರೆಗೆ ವಿಶೇಷ ಕಾರ್ಯಾಚರಣೆ ನಡೆಸಲಾಗಿದ್ದು, ಕೊಕೇನ್, ಎಕ್ಸ್ಟೆಸ್ಸಿ ಹಾಗೂ ಎಲ್ಎಸ್ಡಿ ಕಾಗದ ಚೂರುಗಳನ್ನು ಜಪ್ತಿ ಮಾಡಲಾಗಿದೆ" ಎಂದು ಸಿಸಿಬಿ ಜಂಟಿ ಕಮಿಷನರ್ ಸಂದೀಪ್ ಪಾಟೀಲ ಹೇಳಿದರು.
"ಆರೋಪಿಗಳು ವಿದ್ಯಾಭ್ಯಾಸ ಹಾಗೂ ಉದ್ಯೋಗ ವೀಸಾದಡಿ ನಗರಕ್ಕೆ ಬಂದಿದ್ದು, ತಮ್ಮದೇ ಆದ ವ್ಯವಸ್ಥಿತ ಜಾಲವನ್ನು ರೂಪಿಸಿಕೊಂಡು ಡ್ರಗ್ಸ್ ಮಾರುತ್ತಿದ್ದರು. ಇವರಿಂದ ಕೆಲವು ಕಾಲೇಜು ವಿದ್ಯಾರ್ಥಿಗಳು ಹಾಗೂ ಖಾಸಗಿ ಕಂಪೆನಿಗಳ ಉದ್ಯೋಗಿಗಳು ಡ್ರಗ್ಸ್ ಖರೀದಿ ಮಾಡುತ್ತಿದ್ದರು" ಎಂದು ತಿಳಿಸಿದರು.
ಕಾರ್ಯಚರಣೆಯ ಸಂದರ್ಭ ಸಿಸಿಬಿ ಪೊಲೀಸರು, 75 ಲಕ್ಷ. ರೂ. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ.