ನವದೆಹಲಿ,ಮಾ16 (DaijiworldNews/MS): ಭಾರತೀಯ ರೈಲ್ವೆಯನ್ನು ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡುವುದಿಲ್ಲ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಮಂಗಳವಾರ ಸ್ಪಷ್ಟಪಡಿಸಿದ್ದಾರೆ.
ಸದನದಲ್ಲಿ ರೈಲ್ವೆಗಾಗಿ ಬಿಡುಗಡೆಯಾದ ಅನುದಾನ ಚರ್ಚೆಯ ಸಂದರ್ಭ ಉತ್ತರಿಸಿದ ಅವರು , ರೈಲ್ವೆಯೂ ಪ್ರತಿಯೊಬ್ಬ ಭಾರತೀಯನ ಸ್ವತ್ತು, ಅದು ಭಾರತ ಸರ್ಕಾರದ ಒಡೆತನದಲ್ಲಿ ಇರಲಿದೆ. ಪ್ರಧಾನಿ ಮೋದಿ ಸರ್ಕಾರ ರೈಲ್ವೆ ಹೂಡಿಕೆಯನ್ನು ಹೆಚ್ಚಿಸಿದ್ದು, 2019-20ರ ಆರ್ಥಿಕ ವರ್ಷದಲ್ಲಿ 1.5 ಲಕ್ಷ ಕೋಟಿ ಇದ್ದ ಹೂಡಿಕೆ 2021-22ರ ಹಣಕಾಸು ವರ್ಷದಲ್ಲಿ 2.15 ಲಕ್ಷ ಕೋಟಿಗೆ ಹೆಚ್ಚಿಸಿದೆ ಎಂದು ಹೇಳಿದರು.
ಅಂತೆಯೇ ಭಾರತೀಯ ರೈಲ್ವೇ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಹೆಚ್ಚು ಒತ್ತು ನೀಡುತ್ತಿದ್ದು, ರೈಲ್ವೆ ಅಪಘಾತದಿಂದಾಗಿ ಕಳೆದೆರಡು ವರ್ಷಗಳಲ್ಲಿ ಯಾವುದೇ ಪ್ರಯಾಣಿಕರ ಸಾವು ಸಂಭವಿಸಿಲ್ಲ ಎಂದು ಹೇಳಿದರು.