ನವದೆಹಲಿ, ಮಾ.16 (DaijiworldNews/HR): ಭಾರತೀಯ ಸಂವಿಧಾನ ರಚನಾ ಸಮಿತಿಯ ಭಾಗವಾಗಿದ್ದ ಕೇವಲ್ ಕೃಷ್ಣ(107) ಕೊರೊನಾ ಲಸಿಕೆಯ ಮೊದಲ ಡೋಸ್ನ್ನು ಸ್ವೀಕರಿಸಿದ್ದು, ಈ ಮೂಲಕ ದೇಶದಲ್ಲಿ ಕೊರೊನಾ ಲಸಿಕೆಯ ಹಾಕಿಸಿಕೊಂಡ ಅತ್ಯಂತ ಹಿರಿಯ ನಾಗರಿಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎನ್ನಲಾಗಿದೆ.
ಕೇವಲ್ ಕೃಷ್ಣ ಅವರ್ರು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಜೊತೆ ಕೆಲಸ ಮಾಡಿದ್ದರು ಎನ್ನಲಾಗಿದ್ದು, 1918ರಲ್ಲಿ ವಿಶ್ವಕ್ಕೆ ಸ್ಪ್ಯಾನಿಶ್ ಫ್ಲೂ ಆವರಿಸಿದ್ದ ವೇಳೆ ಕೇವಲ್ ಕೃಷ್ಣರಿಗೆ 5 ವರ್ಷ ವಯಸ್ಸಾಗಿತ್ತು ಎಂದು ಅವರ ಪುತ್ರ ಅನಿಲ್ ಕೃಷ್ಣ ಮಾಹಿತಿ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಅನಿಲ್ ಕೃಷ್ಣ, "ಮಾರ್ಚ್ 2020ರಲ್ಲಿ ಕೊರೊನಾ ಲಾಕ್ಡೌನ್ ಜಾರಿಯಾದ ಬಳಿಕ ಇದೇ ಮೊದಲ ಬಾರಿಗೆ ಕೇವಲ್ ಕೃಷ್ಣ ಲಸಿಕೆಯ ಕಾರಣಕ್ಕಾಗಿ ಮನೆಯಿಂದ ಹೊರ ಬಂದಿದ್ದಾರೆ. ಲಾಕ್ಡೌನ್ ಜಾರಿಯಾದಾಗಿನಿಂದ ನಾವು ಅವರನ್ನ ಮನೆಯಲ್ಲೇ ಸುರಕ್ಷಿತವಾಗಿ ಇರಿಸಿದ್ದೆವು" ಎಂದರು.