ಬೆಂಗಳೂರು, ಮಾ.16 (DaijiworldNews/MB) : ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿ ಈ ವಿಡಿಯೋವನ್ನು ಎಡಿಟ್ ಮಾಡಿದ ಆರೋಪದಲ್ಲಿ ಖಾಸಗಿ ಜಾಹೀರಾತು ಕಂಪನಿಯೊಂದರ ಮೇಲೆ ವಿಶೇಷ ತನಿಖಾ ತಂಡದ ಅಧಿಕಾರಿಗಳು ಸೋಮವಾರ ದಾಳಿ ನಡೆಸಿದ್ದಾರೆ.
ಸಿಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಕ್ಕೂ ಮುನ್ನ ಶಿವಾನಂದ ವೃತ್ತದ ರೈಲ್ವೇ ಪ್ಯಾರಲಲ್ ರಸ್ತೆ ಸಮೀಪದ ಟೈಮ್ಸ್ ಕ್ರಿಯೇಷನ್ ಕಚೇರಿಯಲ್ಲಿ ಎಡಿಟ್ ಮಾಡಲಾಗಿದೆ ಎಂದು ಹೇಳಲಾಗಿದ್ದು ಈ ಜಾಹಿರಾತು ಸಂಸ್ಥೆ ಮಾಲೀಕ ಸೇರಿ ಸಿಬ್ಬಂದಿಗಳು ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ನೋಟೀಸ್ ನೀಡಿದೆ. ಈ ವಿಚಾರಣೆ ಅಡುಗೋಡಿಯಲ್ಲಿರುವ ಟೆಕ್ನಿಕಲ್ ಸೆಂಟರ್ನಲ್ಲಿ ನಡೆಯಲಿದೆ ಎಂದು ವರದಿಯಾಗಿದೆ.
ಎಸ್ಐಟಿ ಅಧಿಕಾರಿಗಳು ದಾಳಿ ಕಂಪ್ಯೂಟರ್ನ ಹಲವು ಹಾರ್ಡ್ ಡಿಸ್ಕ್ ಹಾಗೂ ಲ್ಯಾಪ್ಟಾಪ್ಗಳನ್ನು ವಶಕ್ಕೆ ಪಡೆದಿದೆ ಎನ್ನಲಾಗಿದೆ.
ಇನ್ನು ಈ ನಡುವೆ ಸಿಡಿಯಲ್ಲಿರುವ ಯುವತಿ ಈಗಾಗಲೇ ವಿಡಿಯೋ ಮೂಲಕ ತನ್ನ ಮರ್ಯಾದೆ ಹೋಗಿದೆ. ಈ ವಿಡಿಯೋ ಜಾರಕಿಹೊಳಿ ಅವರೇ ಲೀಕ್ ಮಾಡಿದ್ದಾರೆ. ನನಗೆ ಕೆಲಸ ಕೊಡಿಸುವುದಾಗಿ ಅವರು ಹೇಳಿ ಮೋಸ ಮಾಡಿದ್ದಾರೆ ಎಂದು ದೂರಿದ್ದಾಳೆ. ಬಳಿಕ ವಿಚಾರಣೆಗೆ ಹಾಜರಾಗುವಂತೆ ಯುವತಿಗೆ ನೋಟಿಸ್ ನೀಡಲಾಗಿದೆ. ಆದರೆ ಆಕೆ ಇನ್ನೂ ವಿಚಾರಣೆಗೆ ಹಾಜರಾಗಿಲ್ಲ. ಇಮೇಲ್ ಹಾಗೂ ಮನೆಗೆ ಕಳುಹಿಸಿದ ನೋಟಿಸ್ಗಾಗಲಿ ಯುವತಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಹಿನ್ನೆಲೆ ಆಕೆಯ ಶೋಧ ಕಾರ್ಯ ನಡೆಸಲಾಗುತ್ತಿದೆ.