ಬೆಂಗಳೂರು, ಮಾ.16 (DaijiworldNews/HR): ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೆಕ್ಸ್ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತನೊಬ್ಬನ ಪತ್ನಿಗೆ ತನಿಖೆ ನಡೆಸುತ್ತಿರುವ ಎಸ್ಐಟಿಯು ನೋಟಿಸ್ ಜಾರಿ ಮಾಡಿದೆ.
ತುಮಕೂರು ಜಿಲ್ಲೆ ಶಿರಾ ನಿವಾಸಿಯಾದ ಖಾಸಗಿ ಚಾನೆಲ್ ವೊಂದರಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತ ಸಿ.ಡಿ ಪ್ರಕರಣದಲ್ಲಿ ಆತನೇ ಮಾಸ್ಟರ್ ಮೈಂಡ್ ಎನ್ನಲಾಗುತ್ತಿದ್ದು, ಜಾಹೀರಾತು ಏಜೆನ್ಸಿಯೊಂದರ ಮೇಲೆ ದಾಳಿ ನಡೆಸಿದ್ದ ಎಸ್ಐಟಿ ತಂಡ ಅನೇಕ ದಾಖಲೆಗಳನ್ನು ವಶ ಪಡಿಸಿಕೊಂಡಿದೆ. ಆದರೆ ಆತ ಕಳೆದ ಒಂದು ವಾರದಿಂದ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.
ಪತ್ರಕರ್ತನ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗಿರುವುದರಿಂದ ಆತ ಸಿಡಿ ಕೇಸ್ ನಲ್ಲಿ ಆತ ಮಹತ್ವದ ಪಾತ್ರ ವಹಿಸಿದ್ದ ಎಂದು ಶಂಕಿಸಲಾಗಿದ್ದು, ಎಸ್ಐಟಿ ತಂಡ ಆತನ ಪತ್ನಿಗೆ ನೋಟಿಸ್ ನೀಡಿ ತನಿಖಾಧಿಕಾರಿಗಳ ಮುಂದೆ ಹಾಜರಾಗುವಂತೆ ಸೂಚಿಸಿದ್ದಾರೆ.
ಇನ್ನು ಸಿ.ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅನೇಕರಿಗೆ ನೋಟೀಸ್ ನೀಡಲಾಗಿದೆ, ಆದರೆ ಈ ಹಂತದಲ್ಲಿ ಅವರ ಹೆಸರುಗಳನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ಎಸ್ ಐಟಿ ಮುಖ್ಯಸ್ಥ ಹಾಗೂ ಬೆಂಗಳೂರು ಪಶ್ಚಿಮ ವಿಭಾಗದ ಎಸಿಪಿ ಸೌಮೇಂದು ಮುಖರ್ಜಿ ತಿಳಿಸಿದ್ದಾರೆ.