ಕಾಸರಗೋಡು, ಮಾ16 (DaijiworldNews/MS): ಕೇರಳದಲ್ಲಿ 9ನೆಯ ತರಗತಿಯವರೆಗಿನ ವಿದ್ಯಾರ್ಥಿಗಳನ್ನು ಹಾಲಿ ವರ್ಷ ಸಾಮೂಹಿಕವಾಗಿ ತೇರ್ಗಡೆ ಗೊಳಿಸಲು ರಾಜ್ಯ ಶಿಕ್ಷಣ ಇಲಾಖೆಯ ಮಹತ್ವದ ನಿರ್ಧಾರ ಕೈಗೊಂಡಿದೆ.
ಪ್ರಸಕ್ತ ವರ್ಷದ ಶಾಲಾ ತರಗತಿಗಳು ಕೊರೋನಾದ ಹಿನ್ನೆಲೆಯಲ್ಲಿ ನಡೆಯದ ಕಾರಣ ಈ ಮಹತ್ವದ ನಿರ್ಧಾರವನ್ನು ಘೋಷಿಸಲಾಗಿದೆ. ಪ್ಲಸ್ ಟು ತರಗತಿಯ ಪರೀಕ್ಷೆಯ ಬಗ್ಗೆ ಬಳಿಕ ನಿರ್ಧಾರ ತೆಗೆದುಕೊಳ್ಳಲಾಗುವುದು. 10 ಮತ್ತು 12ನೇ ತರಗತಿಗಳ ವಿದ್ಯಾರ್ಥಿಗಳಿಗೆ ಪರಿಷ್ಕೃತ ತರಗತಿಗಳು ಮಾರ್ಚ್ ತಿಂಗಳ ಅಂತ್ಯದವರೆಗೆ ಮುಂದುವರಿಯುತ್ತದೆ.
ಕೋವಿಡ್ ಅನಿಯಂತ್ರಿತವಾಗಿ ವ್ಯಾಪಿಸುತ್ತಿರುವುದರಿಂದ ಎಸೆಸೆಲ್ಸಿ ಮತ್ತು ಕ್ಲಾಸ್ ತರಗತಿ ಹೊರತುಪಡಿಸಿ ಉಳಿದ ತರಗತಿಗಳು ವರ್ಷಾಂತ್ಯದ ಪರೀಕ್ಷೆಗಳನ್ನು ನಡೆಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಷರತ್ತುಗಳಿಗೆ ಒಳಪಟ್ಟು 9ನೇ ತರಗತಿ ವರೆಗೂ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ತೇರ್ಗಡೆ ಯಾವುದನ್ನು ನಿರ್ಧರಿಸುವ ಮಾನದಂಡಗಳನ್ನು ಮುಂದೆ ತೀರ್ಮಾನಿಸಲಾಗುತ್ತದೆ.