ಕೇರಳ, ಮಾ. 15 (DaijiworldNews/SM): ಕರ್ನಾಟಕ ಸೇರಿದಂತೆ ದೆಹಲಿಗಳಲ್ಲಿ ರಾಷ್ಟ್ರೀಯ ತನಿಖಾ ದಳ ಐದಕ್ಕೂ ಹೆಚ್ಚು ಪ್ರದೇಶಗಳಲ್ಲಿ ದಾಳಿ ನಡೆಸಿದ್ದು, ಐಎಸ್ ಸಂಚು ಭೇದಿಸಿದೆ.
ದಾಳಿಗೆ ಸಂಬಂಧಿಸಿದಂತೆ ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ. ಐಎಸ್ ಜಾಲಕ್ಕೆ ಸಂಬಂಧಿಸಿದಂತೆ ಎರಡು ದಿನಗಳ ಹಿಂದೆಯೇ ಎನ್ಐಎ ದೆಹಲಿ ಘಟಕ ಪ್ರಕರಣ ದಾಖಲಿಸಿಕೊಂಡಿತ್ತು. ಅಲ್ಲದೆ, ಕಾರ್ಯಾಚರಣೆ ನಡೆಸಿ ಒಬ್ಬನನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಆತನು ನೀಡಿದ ಮಾಹಿತಿಯಂತೆ ಕಾರ್ಯಾಚರಣೆ ನಡೆಸಲಾಗಿದೆ. ಕೇರಳದಲ್ಲಿ ಪಡನ್ನ ತೈಕಡಪ್ಪುರದಲ್ಲಿ ಇರ್ಷಾದ್ ನ ಮನೆಗೆ ಕೊಚ್ಚಿಯಿಂದ ಬಂದ ಎನ್ ಐ ಎ ದಾಳಿ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದೆ.
ಐಎಸ್ ಸೇರಿಕೊಂಡಿದ್ದವರ ಪೈಕಿ ಕೆಲವರು ಭಾರತದಲ್ಲೇ ಇದ್ದಾರೆ ಮತ್ತೆ ಕೆಲವರು ವಿದೇಶಕ್ಕೆ ತೆರಳಿದ್ದಾರೆ ಎಂದು ದಾಳಿ ಸಂದರ್ಭದಲ್ಲಿ ತಿಳಿದುಬಂದಿದೆ. ಭಾರತದಲ್ಲಿ ತನ್ನ ಚಟುವಟಿಕೆಗಳನ್ನು ವಿಸ್ತರಿಸುವುದಕ್ಕಾಗಿ ಐಎಸ್ ಯತ್ನಿಸುತ್ತಿದೆ ಎಂಬುದು ಈ ದಾಳಿಯ ಮೂಲಕ ತಿಳಿದುಬಂದಿದೆ.