ಕೊಲ್ಕತ್ತಾ, ಮಾ.15 (DaijiworldNews/PY): "ನನ್ನ ನೋವಿಗಿಂತ ನನಗೆ ಜನರ ನೋವು ದೊಡ್ಡದು" ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
"ನನಗೆ ಗಾಯವಾಗಿದೆ. ನಾನು ಅಪಾಯದಿಂದ ಪಾರಾಗಿದ್ದು ನನ್ನ ಅದೃಷ್ಟ. ನನಗೆ ನಡೆಯಲು ಆಗುತ್ತಿಲ್ಲ. ಮುರಿದ ಕಾಲಿನಿಂದ ಹೊರಕ್ಕೆ ಬರಲು ಸಾಧ್ಯವಿಲ್ಲ ಎಂದು ಕೆಲವು ಭಾವಿಸಿದ್ದರು" ಎಂದಿದ್ದಾರೆ.
"ಇಲ್ಲಿ ಬಿಜೆಪಿ ಸುಳ್ಳು ಹೇಳಿಕೊಂಡು ಜಯ ಸಾಧಿಸಿದೆ. ಎಲ್ಲವನ್ನೂ ಅವರು ಮಾರಾಟ ಮಾಡಿದ್ದಾರೆ" ಎಂದು ಪುರುಲಿಯಾದ ಜನತೆಗೆ ಹೇಳಿದ್ದಾರೆ.
"ಟಿಎಂಸಿ ಗಮನ ಎಂದಿಗೂ ಅಭಿವೃದ್ದಿ ಕಡೆಗಾದರೆ, ಬಿಜೆಪಿ ಇಂಧನ ಬೆಲೆಗಳನ್ನು ಹೆಚ್ಚಿಸುತ್ತಾ ಜನಸಾಮಾನ್ಯರಿಗೆ ಮತ್ತಷ್ಟು ಕಷ್ಟ ನೀಡುತ್ತಿದೆ. ವಿಧವೆ ಪಿಂಚಣಿಗೆ ನಮ್ಮ ಸರ್ಕಾರ 1000 ರೂ. ಘೋಷಿಸಿದೆ. ಅಲ್ಲದೇ ಡುರೆಯಿ ಸರ್ಕಾರದ ಯೋಜನೆ ಅಡಿಯಲ್ಲಿ ಜಾತಿ ಪ್ರಮಾಣ ಪತ್ರವನ್ನು ನೀಡಿದ್ದೇವೆ" ಎಂದಿದ್ದಾರೆ.
ಇಂದು ಮಮತಾ ಬ್ಯಾನರ್ಜಿ ಅವರು ಪುರುಲಿಯಾದಲ್ಲಿ ಗಾಲಿ ಕುರ್ಚಿಯ ಮೇಲೆ ಕುಳಿತುಕೊಂಡು ಸುಮಾರು 300 ಕಿ.ಮೀ ಪ್ರಮಾಣ ಮಾಡಲಿದ್ದಾರೆ.