ಮುಂಬೈ, ಮಾ.15 (DaijiworldNews/PY): ಉದ್ಯಮಿ ಮುಕೇಶ್ ಅಂಬಾನಿ ಅವರ ಮನೆ ಸಮೀಪ ಸ್ಪೋಟಕಗಳಿದ್ದ ವಾಹನ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿದ್ದ ಸಹಾಯಕ ಪೊಲೀಸ್ ಇನ್ಸ್ಪೆಕ್ಟರ್ ಸಚಿನ್ ವಾಜೆ ಅವರನ್ನು ಸೋಮವಾರ ವಜಾಗೊಳಿಸಲಾಗಿದೆ.
"ಸಚಿನ್ ವಾಜೆ ಅವರನ್ನು ಪೊಲೀಸ್ ವಿಶೇಷ ಶಾಖೆಯ ಹೆಚ್ಚುವರಿ ಆಯುಕ್ತರ ಆದೇಶದ ಮೇರೆಗೆ ಅಮಾನತು ಮಾಡಲಾಗಿದೆ" ಎಂದು ಪೊಲೀಸ್ ಉಪ ಆಯುಕ್ತ ಎಸ್.ಚೈತನ್ಯ ಹೇಳಿದರು.
ಮಾ.13ರ ಶನಿವಾರದಂದು ಸಚಿನ್ ವಾಜೆ ಅವರನ್ನು ಎನ್ಐಎ ಬಂಧಿಸಿತ್ತು. ಮುಖೇಶ್ ಅಂಬಾನಿ ಅವರ ಮನೆ ಮುಂದೆ ಪತ್ತೆಯಾಗಿದ್ದ ಸ್ಕಾರ್ಪಿಯೋ ಕಾರಿನ ಮಾಲೀಕ ಮುನ್ಸುಖ್ ಹಿರೇನ್ ಅವರ ಹತ್ಯೆ ಪ್ರಕರಣದ ಆರೋಪವನ್ನು ಕೂಡಾ ಸಚಿನ್ ವಾಜೆ ಅವರು ಎದುರಿಸುತ್ತಿದ್ದಾರೆ.
ಸಚಿನ್ ವಾಜೆ ಅವರನ್ನು ಮುಂಬೈ ನ್ಯಾಯಾಲಯವು ಮಾರ್ಚ್ 25 ರ ತನಕ ಎನ್ಐಎ ಕಸ್ಟಡಿಗೆ ನೀಡಿದೆ.