ಬೆಂಗಳೂರು, ಮಾ 15(DaijiworldNews/MS):ಬುಗಿಲೆದ್ದಿರುವ ಸಿಡಿ ವಿವಾದ ರಾಜ್ಯ ರಾಜಕೀಯ ವಲಯದಲ್ಲಿ ತಲ್ಲಣ ಸೃಷ್ಟಿಸಿರುವಂತೆ ಇದನ್ನೇ ಅಸ್ತ್ರವಾಗಿರಿಸಿರುವ ಕಾಂಗ್ರೆಸ್ ರಾಜ್ಯ ಬಿಜೆಪಿ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.
ರಾಜ್ಯ ರಾಜಕೀಯದಲ್ಲಿ ನಡೆದಿರುವ ಸಿಡಿ ರಾಜಕೀಯ ಹಾಗೂ ಬಿಎಸ್ವೈ ಮುಕ್ತ ಬಿಜೆಪಿ ಮಾಡುವದಲ್ಲದೆ, ಬಿಜೆಪಿ ಮುಕ್ತ ಕರ್ನಾಟಕವಾಗುವುದಕ್ಕೆ ಮುನ್ನುಡಿ ಆಗಲಿದೆ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ. ಒಂದೆಡೆ ಬಿಎಸ್ ವೈ ಮುಕ್ತ ಬಿಜೆಪಿ ಮಾಡಬೇಕೆಂಬ ಅವಸರವಿದ್ದರೆ ಮತ್ತೊಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಂದಲೂ ಪಕ್ಷಕ್ಕೆ ಲಾಭವಿಲ್ಲ ಎಂಬ ಹತಾಸೆ ಬಿಜೆಪಿಗೆ ಎಂದು ವ್ಯಂಗವಾಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ , "ಬಿಜೆಪಿಗೆ ಬಿಎಸ್ ವೈ ಮುಕ್ತ ಬಿಜೆಪಿ ಆಗಬೇಕೆನ್ನುವ ಅವಸರ. ಯಕ್ಷಗಾನದ ಹಾಸ್ಯ ಪಾತ್ರದಾರಿಯಂತಿರುವ ಬೆನ್ನೆಲುಬಿಲ್ಲದ ನಳಿನ್ ಕುಮಾರ್ ಕಟೀಲ್ ಅವರಿಂದ ಪಕ್ಷಕ್ಕೆ ನಯಾಪೈಸೆ ಲಾಭವಿಲ್ಲದ ನಿರಾಸೆ! ಹಿಂದೆ 3 ಸಿಎಂ ಬದಲಿಸಿದ್ದ ಬಿಜೆಪಿ ಈ ಬಾರಿ 6 ಬದಲಿಸುವ ಲಕ್ಷಣವಿದೆ! ಬಿಎಸ್ ವೈ ಅವರು ಮತ್ತೊಮ್ಮೆ ಕೆಜೆಪಿಯ ತೆಂಗಿನಕಾಯಿ ಹುಡುಕುವ ಕಾಲ ಸನ್ನಿಹಿತವಾಗಿದೆ ಎಂದು ವಿಡಂಬನೆ ಮಾಡಿದೆ.