ಪಣಜಿ, ಮಾ.15 (DaijiworldNews/PY): ಖ್ಯಾತ ವರ್ಣಚಿತ್ರಕಾರ ಹಾಗೂ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಲಕ್ಷ್ಮಣ್ ಪೈ (95) ಅವರು ಮಾ.14ರ ರವಿವಾರ ಸಂಜೆ ಗೋವಾದ ತಮ್ಮ ನಿವಾಸದಲ್ಲಿ ನಿಧನರಾದರು.
1926ರಲ್ಲಿ ಗೋವಾದಲ್ಲಿ ಜನಿಸಿದ ಲಕ್ಷ್ಮಣ್ ಪೈ ಅವರಿಗೆ ನೆಹರೂ ಪ್ರಶಸ್ತಿ, ಪದ್ಮಭೂಷಣ್, ಲಲಿತಕಲಾ ಅಕಾಡೆಮಿ ಪ್ರಶಸ್ತಿ ಹಾಗೂ ಪದ್ಮಶ್ರೀ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ.
ಲಕ್ಷ್ಮಣ್ ಪೈ ಅವರ ನಿಧನಕ್ಕೆ ಗೋವಾ ಸಿಎಂ ಪ್ರಮೋದ್ ಸಾವಂತ್ ಅವರು ಸಂತಾಪ ವ್ಯಕ್ತಪಡಿಸಿದ್ದು, "ಲಕ್ಷ್ಮಣ್ ಪೈ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಗೋವಾ ಇಂದು ರತ್ನವೊಂದನ್ನು ಕಳೆದುಕೊಂಡಿದೆ. ಕಲಾ ಕ್ಷೇತ್ರಕ್ಕೆ ಅವರು ನೀಡಿದ ಅಪಾರ ಕೊಡುಗೆಯನ್ನು ನಾವು ಯಾವಾಗಲೂ ನೆನಪಿಸಿಕೊಳ್ಳುತ್ತೇವೆ. ಓಂ ಶಾಂತಿ" ಎಂದು ಟ್ವೀಟ್ ಮಾಡಿದ್ದಾರೆ.