ತಿರುಪತಿ, ಮಾ. 15 (DaijiworldNews/HR): ಅಲಿಪಿರಿ-ತಿರುಮಲದ ಬಸ್ ನಿಲ್ದಾಣದಲ್ಲಿ ಫೆಬ್ರವರಿ 27 ರಂದು ಅಪಹರಿಸಲ್ಪಟ್ಟ ಛತ್ತೀಸ್ಗಢದ ಆರು ವರ್ಷದ ಬಾಲಕ ರವಿವಾರ ಸಂಜೆ ಮತ್ತೆ ಪೋಷಕರ ಮಡಿಲು ಸೇರಿದ್ದಾನೆ.
ತಿರುಪತಿ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಅಪಹರಣಕಾರ ಕೋಲಾರ ಜಿಲ್ಲೆಯ ಮುಲ್ಬಗಲ್ ತಾಲೂಕಿನ ಪುಟ್ಟೇನಹಳ್ಳಿ ಗ್ರಾಮದ ನಿವಾಸಿ ಎಂದು ತಿಳಿದುಬಂದಿದ್ದು, ಅಪಹರಣಕಾರನನ್ನು ಗುರುತಿಸಲು ಪೊಲೀಸರು ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದರಿಂದ ಅಪಹರಣಕಾರ ಬಾಲಕನನ್ನು ವಿಜಯವಾಡದಲ್ಲಿ ಬಿಟ್ಟು ಹೋಗಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ.
ಇನ್ನು ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ಅಪಹರಣಕಾರನನ್ನು ಬಂಧಿಸಲು ವಿಶೇಷ ತಂಡಗಳನ್ನು ರಚಿಸಿದ್ದಾರೆ ಎಂದು ತಿರುಪತಿ ನಗರ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಸಿ.ಎಚ್. ವೆಂಕಟ ಅಪ್ಪಲಾ ನಾಯ್ಡು ತಿಳಿಸಿದ್ದಾರೆ.