ನವದೆಹಲಿ, ಮಾ. 15 (DaijiworldNews/HR): "ಕೊರೊನಾ ಸೋಂಕು ಇಂದಿಗೂ ಅತಿ ದೊಡ್ಡ ಬೆದರಿಕೆಯಾಗಿದ್ದು, ಜನರು ಸುರಕ್ಷತಾ ಕ್ರಮಗಳನ್ನು ಬಿಡಬಾರದು" ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಈ ಮೊದಲೇ ಎಚ್ಚರಿಸಿದಂತೆ ಕೊರೊನಾ ಜಗತ್ತಿಗೆ ಅತಿ ದೊಡ್ಡ ಬೆದರಿಕೆಯಾಗಿ ಮುಂದುವರೆದಿದ್ದು, ಜನರೆಲ್ಲರು ಮಾಸ್ಕ್ ಧರಿಸಿ ಮತ್ತು ಎಲ್ಲಾ ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕು" ಎಂದು ಹೇಳಿದ್ದಾರೆ.
ಇನ್ನು ಕೊರೊನಾ ಸೋಂಕಿತರ ಸಂಖ್ಯೆ ಕಳೆದ ನಾಲ್ಕು ವಾರಗಳಲ್ಲಿ ಹೆಚ್ಚಾಗಿರುವ ಆಗಿರುವ ನಕ್ಷೆಯನ್ನು ಕೂಡ ಅವರು ತೋರಿಸಿದ್ದು, ವಾರದಲ್ಲಿ ಶೇ.33 ರಷ್ಟು ಸೋಂಕು ಏರಿಕೆಯಾಗಿರುವುದನ್ನು ಕೂಡ ಅವದ್ರಲ್ಲಿ ಕಾಣಬಹುದು.