ಬೆಂಗಳೂರು, ಮಾ.15 (DaijiworldNews/PY): "ಕೊರೊನಾ ಪ್ರಕರಣಗಳು ಹೆಚ್ಚಾದರೆ ಏನು ಮಾಡಬೇಕು?. ಜನರು ಮುಂಜಾಗ್ರತೆ ವಹಿಸಬೇಕು. ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಇಂದು ಸಂಜೆ ಸಭೆ ಕರೆದಿದ್ದಾರೆ" ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬೇರೆ ದೇಶಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ. ಸಿಎಂ ಬಿಎಸ್ವೈ ಅವರು ನಿನ್ನೆ ಸೂಚನೆ ನೀಡಿದ್ದಾರೆ. ಜನರು ನಿಯಮಗಳನ್ನು ಪಾಲಿಸದೇ ಇದ್ದರೆ, ಸರ್ಕಾರ ಏನೂ ಮಾಡಲು ಸಾಧ್ಯ?" ಎಂದು ಕೇಳಿದ್ದಾರೆ.
"ಲಾಕ್ಡೌನ್ ಜಾರಿ ಮಾಡಬಾರದು ಎಂದೇ ಸರ್ಕಾರ ಯೋಚನೆ ಮಾಡುತ್ತಿದೆ. ಜನರು ನಿಯಮ ಪಾಲನೆ ಮಾಡದೇ ಇದ್ದರೆ ಏನೂ ಮಾಡಲು ಸಾಧ್ಯವಿಲ್ಲ. ಸಭೆರಯಲ್ಲಿ ಮಾಸ್ಕ್, ದಂಡ ಹೆಚ್ಚಳದ ವಿಚಾರದ ಬಗ್ಗೆ ಪ್ರಸ್ತಾಪವಾಗಲಿದೆ. ಸದ್ಯಕ್ಕೆ ನೈಟ್ ಕರ್ಫ್ಯೂ ಜಾರಿ ಬಗ್ಗೆ ಯೋಚನೆ ಮಾಡಿಲ್ಲ. ಇಂದು ಸಂಜೆ ಸಿಎಂ ಜೊತೆ ಸಭೆ ಕರೆಯಲಾಗಿದೆ. ಎಲ್ಲವನ್ನು ಸಂಜೆ ನಡೆಯುವ ಸಭೆಯಲ್ಲಿ ತೀರ್ಮಾನ ಮಾಡುತ್ತೇವೆ" ಎಂದು ತಿಳಿಸಿದ್ದಾರೆ.
"ಸಾಮಾಜಿಕ ಅಂತರ, ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳದಿರುವುದು ಮಾಡುತ್ತೀರಿ. ಸಭೆ-ಸಮಾರಂಭಗಳಿಗೆ ಹೆಚ್ಚು ಜನರನ್ನು ಸೇರಿಸುತ್ತೀರಿ. ಕೊರೊನಾ ಸಂಖ್ಯೆ ಹೆಚ್ಚಾದ ವೇಳೆ ಸರ್ಕಾರವನ್ನು ಬೊಟ್ಟು ಮಾಡಿ ತೋರಿಸುತ್ತೀರಿ. ನಾವು ಎಷ್ಟು ಕ್ರಮ ಕೈಗೊಳ್ಳಲು ಸಾಧ್ಯ. ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗಲು ಯಾರು ಕಾರಣ ಎನ್ನುವ ಬಗ್ಗೆ ಯೋಚಿಸಬೇಕು" ಎಂದಿದ್ದಾರೆ.
"ಜನರು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಕೊರೊನಾ ಲಸಿಕೆ ಪಡೆದುಕೊಳ್ಳಿ. ಲಾಕ್ಡೌನ್ ಮಾಡಬಾರದು ಎನ್ನುವುದು ನಮ್ಮ ಉದ್ದೇಶ. ಜನರು ಜವಾಬ್ದಾರಿಯನ್ನು ಮರೆಯಬಾರದು ಎಂದು ಮನವಿ ಮಾಡುತ್ತೇವೆ" ಎಂದು ಹೇಳಿದ್ದಾರೆ.