ರಾಜಸ್ಥಾನ, ಮಾ. 15 (DaijiworldNews/HR): ರಾಜಸ್ಥಾನದ ಬರಾನ್ ಎಂಬಲ್ಲಿ ತನ್ನ ಪತಿಯ ಕಣ್ಣೆದುರೇ 30 ವರ್ಷದ ಮಹಿಳೆ ಮೇಲೆ ಐವರು ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ
ಈ ಕುರಿತು ಎಸ್.ಪಿ ವಿನೀತ್ ಕುಮಾರ್ ಬನ್ಸಾಲ್ ಮಾಹಿತಿ ನೀಡಿದ್ದು, ಮಹಿಳೆಯ ಮಾಜಿ ಪತಿ ಮತ್ತು ಆತನ ಸಹಾಯಕರು ಸೇರಿದಂತೆ ಐವರು ಪುರುಷರು ಬರಾನ್ ಅತ್ರು ರಾಜ್ಯ ಹೆದ್ದಾರಿಯಲ್ಲಿ ದಂಪತಿಗಳನ್ನು ತಡೆದು, ಅತ್ಯಾಚಾರ ಎಸಗಿದ್ದಾರೆ ಎಂದು ತಿಳಿಸಿದ್ದಾರೆ.
ದೇವಸ್ಥಾನಕ್ಕೆ ಭೇಟಿ ನೀಡಿ ದಂಪತಿ ಬೈಕ್ ನಲ್ಲಿ ಮನೆಗೆ ಮರಳುತ್ತಿದ್ದ ವೇಳೆ, ಆರೋಪಿ ದಂಪತಿಯನ್ನು ಸಮೀಪದ ಹೊಲಕ್ಕೆ ಕರೆದೊಯ್ದು ಅಲ್ಲಿ ಪತಿಯನ್ನು ಕಟ್ಟಿ ಹಾಕಿ ಅತ್ಯಾಚಾರ ವೆಸಗಿದ್ದಾನೆ ಎನ್ನಲಾಗಿದೆ.
ಇನ್ನು ಮಹಿಳೆ ತನ್ನ ಪತಿಯೊಂದಿಗೆ ಸದರ್ ಪೊಲೀಸ್ ಠಾಣೆಗೆ ತೆರಳಿ ದಿನೇಶ್ ಮತ್ತು ಆತನ ನಾಲ್ವರ ವಿರುದ್ಧ ದೂರು ನೀಡಿದ್ದು, ದೂರಿನ ಹಿನ್ನಲೆಯಲ್ಲಿ ಐವರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಎಸ್.ಪಿ ವಿನೀತ್ ತಿಳಿಸಿದ್ದಾರೆ.