ನವದೆಹಲಿ,ಮಾ 15(DaijiworldNews/MS): ಭಾರತದ ಪ್ರಾಚೀನ ಆಯುರ್ವೇದ ಮತ್ತು ಸಾಂಪ್ರದಾಯಿಕ ಔಷದ ಪದ್ದತಿಯೂ, ರಫ್ತು ಜಾಗತಿಕ ಉತ್ತೇಜನವನ್ನು ಪಡೆಯಲು ಸಜ್ಜಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ದೇಶದಲ್ಲಿ ಸಾಂಪ್ರದಾಯಿಕ ಔಷಧಕ್ಕಾಗಿ ಜಾಗತಿಕ ಕೇಂದ್ರವನ್ನು (ಜಿಸಿಟಿಎಂ) ಸ್ಥಾಪಿಸಲು ಯೋಜಿಸಿದೆ.
ಇದರಿಂದ ಭಾರತದ ಆಯುರ್ವೇದ ಮತ್ತು ಇತರ ಸಾಂಪ್ರಾದಾಯಿಕ ಔಷಧಕ್ಕೆ ಮತ್ತಷ್ಟು ಬಲ ಸಿಗಲಿದೆ. ಸಾಂಪ್ರದಾಯಿಕ ಔಷಧ ಪದ್ಧತಿ ಕ್ಷೇತ್ರದಲ್ಲಿ ಸಾಕ್ಷ್ಯಾಧಾರ ಆಧರಿತ ಸಂಶೋಧನೆ ತರಬೇತಿಗೆ ಜಿಸಿಟಿಎಂ ಸ್ಥಾಪನೆಯಿಂದ ಮತ್ತಷ್ಟು ಉತ್ತೇಜನ ಸಿಗಲಿದೆ ಎಂದು ಆಯುಷ್ ಸಚಿವಾಲಯ ಅಭಿಪ್ರಾಯಪಟ್ಟಿದೆ. ಜೊತೆಗೆ ಆಯುರ್ವೇದ ಮತ್ತಿತರ ಸಾಂಪ್ರದಾಯಿಕ ಔಷಧ ಪದ್ಧತಿಗಳ ಬಗ್ಗೆ ಜಾಗತಿಕ ಮಟ್ಟದಲ್ಲಿ ಅರಿವು ಹೆಚ್ಚಿಸುವುದಕ್ಕೆ ನೆರವಾಗಲಿದೆ ಎಂದು ಹೇಳಿದೆ.