ಬಲಿಯಾ, ಮಾ.15 (DaijiworldNews/MB) : ''ತಾಜ್ಮಹಲ್ಗೆ ರಾಮಮಹಲ್ ಎಂದು ಶೀಘ್ರವೇ ಮರು ನಾಮಕರಣ ಮಾಡುತ್ತೇವೆ'' ಎಂದು ಉತ್ತರಪ್ರದೇಶದ ಬಿಜಪಿ ಶಾಸಕ ಸುರೇಂದ್ರ ಸಿಂಗ್ ಹೇಳಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡುತ್ತಾ ವಿವಾದ ಮೈಗೆಳೆದಿಕೊಂಡಿರುವ ಬಿಜೆಪಿ ಶಾಸಕ, ''ತಾಜ್ಮಹಲ್ ಶಿವನ ದೇವಾಲಯವಾಗಿತ್ತು. ಈ ಹಿನ್ನೆಲೆಯಲ್ಲಿ ನಾವು ತಾಜ್ ಮಹಲ್ ಅನ್ನು ರಾಮ ಮಹಲ್ ಎಂದು ಮರುನಾಮಕರಣ ಮಾಡುತ್ತೇವೆ'' ಎಂದು ಹೇಳಿದ್ದಾರೆ.
''ರಾಮದಾಸರು ಭಾರತ ದೇಶವನ್ನು ಅಂದು ಶಿವಾಜಿಗೆ ಒಪ್ಪಿಸಿದರು. ಅದರಂತೆ ಇಂದು ಗೋರಖನಾಥ್ ಅವರು ಉತ್ತರಪ್ರದೇಶವನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಒಪ್ಪಿಸಿದ್ದಾರೆ'' ಎಂದೂ ಕೂಡಾ ಶಾಸಕರು ಹೇಳಿಕೊಂಡಿದ್ದಾರೆ.
ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ ಘಟನೆ ಸಂಬಂಧ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಬೆಂಬಲಿಗರ ವಿರುದ್ಧ ಎಫ್ಐಆರ್ ದಾಖಲಾಗಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ''ಲಾಠಿ ಏಟು ನೀಡುವ ಸಮಾಜವಾದಿ ಬೆಂಬಲಿಗರ ಆಟ ಯೋಗಿ ಅವರ ಆಡಳಿತದಲ್ಲಿ ನಡೆಯಲ್ಲ'' ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನು ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಈ ರೀತಿಯ ವಿವಾದಾತ್ಮಕ ಹೇಳಿಕೆ ನೀಡಿರುವುದು ಇದೇ ಮೊದಲೇನಲ್ಲ. ಈ ಹಿಂದೆ 2018 ರಲ್ಲಿ, ''ಮೊಘಲರ ಕಾಲದಲ್ಲಿ ಭಾರತದಲ್ಲಿ ಕಟ್ಟಲಾಗಿರುವ ಎಲ್ಲಾ ಐತಿಹಾಸಿಕ ಸ್ಥಳಗಳ, ಸ್ಮಾರಕಗಳ ಹೆಸರು ಬದಲಾಗಬೇಕು'' ಎಂದು ಹೇಳಿದ್ದರು. ಇತ್ತೀಚೆಗೆ ಮೊಘಲ್ ಸಂಗ್ರಾಹಾಲಯವನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಛತ್ರಪತಿ ಶಿವಾಸಿ ಮಹರಾಜ್ ಸಂಗ್ರಾಹಲಯವಾಗಿ ಬೆದಲಾಯಿಸಿದ್ದಾರೆ. ಇದಕ್ಕೂ ಮುನ್ನ ಅವರು ಉತ್ತರ ಪ್ರದೇಶದ ಅಲಹಾಬಾದ್ನ್ನು ಪ್ರಯಾಗ್ ರಾಜ್ ಆಗಿ ಹಾಗೂ ಪೈಝಬಾದ್ನ್ನು ಅಯೋಧ್ಯೆ ಎಂದು ಮರುನಾಮಕರಣ ಮಾಡಿದ್ದಾರೆ.