ನವದೆಹಲಿ, ಮಾ.15 (DaijiworldNews/PY): ಬ್ಯಾಂಕ್ ಯೂನಿಯನ್ಗಳ ಒಕ್ಕೂಟವಾಗಿರುವ ಯುಎಫ್ಬಿಯು ಸೋಮವಾರ ಹಾಗೂ ಮಂಗಳವಾರ ಮುಷ್ಕರ ನಡೆಸಲು ಕರೆ ನೀಡಿದ್ದು, ಇದರಿಂದ ಬ್ಯಾಂಕ್ಗಳ ಸೇವೆಗೆ ಅಡ್ಡಿಯಾಗುವ ಸಾಧ್ಯತೆ ಇದೆ.
ಸಾಂದರ್ಭಿಕ ಚಿತ್ರ
ಖಾಸಗೀಕರಣ ವಿರೋಧಿಸಿ ರಾಷ್ಟ್ರವ್ಯಾಪ್ತಿ ಮುಷ್ಕರಕ್ಕೆ ಕರೆ ನೀಡಲಾಗಿದ್ದು, ಬ್ಯಾಂಕ್ ಶಾಖೆಗಳ ಹಾಗೂ ಕಛೇರಿಗಳ ಸಾಮಾನ್ಯ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಉಂಟಾಗದಂತೆ ವ್ಯವಸ್ಥೆ ಮಾಡಲಾಗಿದೆ. ಆದರೆ, ಮುಷ್ಕರದ ಕಾರಣ ದೈನಂದಿನ ಕಾರ್ಯಚಟುವಟಿಕೆಯ ಮೇಲೆ ಪರಿಣಾಮ ಉಂಟಾಗುವ ಸಾಧ್ಯತೆ ಇದೆ.
ಕೇಂದ್ರ ಬಜೆಟ್ನಲ್ಲಿ ಹಣಕಾಸು ಸಚಿವೆ ನಿರ್ಮಾಲಾ ಸೀತಾರಾಮನ್ ಅವರು, ಸಾರ್ವಜನಿಕ ವಲಯದ ಬ್ಯಾಂಕ್ಗಳನ್ನು ಖಾಸಗೀಕರಣಗೊಳಿಸಲು ಪ್ರಸ್ತಾಪಿಸಿದ ತೀರ್ಮಾನವನ್ನು ವಿರೋಧಿಸಿರುವ ಬ್ಯಾಂಕ್ ಒಕ್ಕೂಟಗಳು ಪ್ರತಿಭಟನೆ ಕೈಗೊಂಡಿವೆ.
ಠೇವಣಿ ಸೇರಿದಂತೆ ಶಾಖೆಗಳಲ್ಲಿ ವಾಪಾಸಾತಿ, ಚೆಕ್ ಕ್ಲಿಯರೆನ್ಸ್ ಹಾಗೂ ಸಾಲದ ಅನುಮೋದನೆಗಳು ಮೇಲೆ ಪರಿಣಾಮ ಬೀರಲಿವೆ. ಎಟಿಎಂ ಸೇವೆಗಳು ಮುಂದುವರೆಯಲಿವೆ.
"ಮುಷ್ಕರದಲ್ಲಿ ಬ್ಯಾಂಕ್ಗಳ 10 ಲಕ್ಷ ನೌಕರರು ಹಾಗೂ ಅಧಿಕಾರಿಗಳು ಭಾಗವಹಿಸಲಿದ್ದಾರೆ" ಎಂದ ಯುಎಫ್ಬಿಯು ಹೇಳಿದೆ.