ನವದೆಹಲಿ, ಮಾ 15(DaijiworldNews/MS):ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯೊಂದಿಗೆ ಸಂಬಂಧ ಹೊಂದಿರುವ ಹಿನ್ನೆಲೆಯಲ್ಲಿಎನ್ ಐಎ ಅಧಿಕಾರಿಗಳು ದೇಶದ ಹತ್ತು ಕಡೆ ದಾಳಿ ನಡೆಸಿದ್ದು, ಐವರನ್ನು ಸೆರೆ ಹಿಡಿಯಲಾಗಿದೆ.
ದೆಹಲಿ, ಕೇರಳ ಮತ್ತು ಕರ್ನಾಟಕ ಸೇರಿದಂತೆ 10 ಸ್ಥಳಗಳಲ್ಲಿ ಎನ್ಐಎ ಅಧಿಕಾರಿಗಳು ಸೋಮವಾರ ದಾಳಿ ನಡೆಸಿದ್ದಾರೆ ಎಂದು ವರದಿ ತಿಳಿಸಿದೆ. ಕೇವಲ 48 ಗಂಟೆಗಳ ಹಿಂದೆ ತನಿಖಾ ಸಂಸ್ಥೆ ನೋಂದಾಯಿಸಿದ ಹೊಸ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಾಳಿಗಳು ನಡೆದಿವೆ.
ಈ ಯುವಕರನ್ನು ಪಾಕಿಸ್ತಾನವು ಸಾಮಾಜಿಕ ಜಾಲತಾಣಗಳು ಮೂಲಕ ಸಂಪರ್ಕಿಸಿತ್ತು. ಪ್ರಭಾವಶಾಲಿ ಮುಸ್ಲಿಂ ಯುವಕರನ್ನು ನೇರವಾಗಿ ಗುರಿಯಾಗಿಸಿಕೊಂಡು ಅವರನ್ನು ನೇಮಕ ಮಾಡಿಕೊಳ್ಳುವುದು, ಅವರಿಗೆ ಆನ್ಲೈನ್ ಮೂಲಕವೇ ತರಬೇತಿ ನೀಡಿ ಸ್ಥಳೀಯ ಮಟ್ಟದಲ್ಲಿ ದಾಳಿಯನ್ನು ಯೋಜಿಸಲು ಪ್ರೇರೇಪಿಸುತ್ತಿತ್ತು ಎಂದು ಮೂಲಗಳು ತಿಳಿಸಿವೆ.