ನವದೆಹಲಿ, ಮಾ 15(DaijiworldNews/MS): ವಿದ್ಯಾರ್ಥಿಗಳನ್ನು ದೇಶಭಕ್ತರನ್ನಾಗಿಸಲು ದಿನನಿತ್ಯ ಶಿಕ್ಷಣದ ನಡುವೆ ದೇಶಭಕ್ತಿ ಪ್ರೇರೆಪಿಸುವ ಪ್ರತ್ಯೇಕ ತರಗತಿ ನಡೆಸಲಾಗುವುದು ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಕಿರಾರಿಯಲ್ಲಿ ಒಳಚರಂಡಿ ಯೋಜನೆ ಉದ್ಘಾಟಿಸಿ ಭಾನುವಾರ ಮಾತನಾಡಿದ ಅರವಿಂದ್ ಕೇಜ್ರಿವಾಲ್, 'ಸಾಮಾನ್ಯವಾಗಿ ಶಾಲೆಗಳಲ್ಲಿ ದೇಶಭಕ್ತಿಯನ್ನು ಕಲಿಸಲಾಗುವುದಿಲ್ಲ. ದಿಲ್ಲಿ ಶಾಲೆಗಳಲ್ಲಿ ಈ ಪ್ರಯತ್ನ ಮಾಡಲಾಗುವುದು. ಈ ಹೊಸ ಪ್ರಯತ್ನದಿಂದ ವಿದ್ಯಾರ್ಥಿಗಳನ್ನು ಅಪ್ಪಟ್ಟ ದೇಶಭಕ್ತರನ್ನಾಗಿಸಲು ಪ್ರಯತ್ನಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಶಾಲೆಗಳಲ್ಲಿ ಪ್ರತಿದಿನ ಒಂದು ಗಂಟೆ ಅವದಿಯನ್ನು ಇದಕ್ಕಾಗಿ ಮೀಸಲಿರಿಸಲು ನಿರ್ಧರಿಸಲಾಗಿದೆ.ಇವು ಪ್ರಮುಖವಾಗಿ ಚರ್ಚಾ ಮಾದರಿ ತರಗತಿಯಾಗಿರುತ್ತದೆ. ಅಲ್ಲಿ ಬಿ.ಆರ್ ಅಂಬೇಡ್ಕರ್, ಭಗತ್ ಸಿಂಗ್ ಸೇರಿದಂತೆ ದೇಶಕ್ಕಾಗಿ ತ್ಯಾಗಗಳನ್ನು ಮಾಡಿದವರ ಚರ್ಚೆಗಳು ನಡೆಯುತ್ತದೆ ಎಂದು ಹೇಳಿದ್ದಾರೆ. ,
ದೆಹಲಿ ಸರ್ಕಾರ ಮಾರ್ಚ್ 9ರಂದು 69 ಸಾವಿರ ಕೋಟಿ ರೂ.ಗಳ ಬಜೆಟ್ ಮಂಡಿಸಿತ್ತು. ಇದರ ಅಡಿಯಲ್ಲಿ 500 ಧ್ವಜದ ಧ್ವಜಗಳ ಸ್ಥಾಪನೆ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಜೀವನಕುರಿತು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದ್ದರು.