ಬಲ್ಲಿಯಾ, ಮಾ. 14 (DaijiworldNews/HR): "ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ನೇತೃತ್ವದಲ್ಲಿ ಆಗ್ರಾದಲ್ಲಿರುವ ತಾಜ್ ಮಹಲ್ ಹೆಸರನ್ನು 'ರಾಮ್ ಮಹಲ್' ಎಂದು ಮರುನಾಮಕರಣ ಮಾಡಲಾಗುವುದು" ಎಂಬುದಾಗಿ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಹೇಳಿಕೆ ನೀಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಈ ಹಿಂದೆ ತಾಜ್ ಮಹಲ್ ಶಿವನ ದೇವಾಲಯವಾಗಿದ್ದು, ಇದರ ಹೆಸರನ್ನು ಆದಿತ್ಯನಾಥ್ ನೇತೃತ್ವದಲ್ಲಿ ರಾಮ ಮಹಲ್ ಎಂದು ಬದಲಾಯಿಸಲಾಗುವುದು. ಆದಿತ್ಯನಾಥ್ ಶಿವಾಜಿಯ ವಂಶಸ್ಥರಾಗಿದ್ದಾರೆ" ಎಂದರು.
ಇನ್ನು "ಸಮರ್ಥ ಗುರು ರಾಮದಾಸ್ ಶಿವಾಜಿಯನ್ನು ಭಾರತಕ್ಕೆ ಅರ್ಪಿಸಿದಂತೆಯೇ ಗೋರಖ್ ನಾಥ್ ಜೀ ಆದಿತ್ಯನಾಥ್ ಅವರನ್ನು ಉತ್ತರ ಪ್ರದೇಶಕ್ಕೆ ಸಮರ್ಪಣೆ ಮಾಡಿದ್ದಾರೆ" ಎಂದು ಮುಖ್ಯಮಂತ್ರಿಯನ್ನು ಹೊಗಳಿ ಹೇಳಿಕೆ ನೀಡಿದ್ದಾರೆ" ಎನ್ನಲಾಗಿದೆ.