ಸೂರತ್,ಮಾ. 14 (DaijiworldNews/HR): ಗುಜರಾತ್ನ ಸೂರತ್ ನಗರದಲ್ಲಿರುವ ಎರಡು ಪ್ರಾಥಮಿಕ ಶಾಲೆಗಳು ಮತ್ತು ಕಾಲೇಜ್ವೊಂದರ 20 ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಹಿನ್ನೆಲೆಯಲ್ಲಿಈ ಶಾಲೆಗಳು ಮತ್ತು ಕಾಲೇಜನ್ನು ಎರಡು ವಾರಗಳ ಕಾಲ ಮುಚ್ಚಲಾಗಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೂರತ್ನ ಎರಡು ಪ್ರಾಥಮಿಕ ಶಾಲೆಗಳಲ್ಲಿ ಕ್ರಮವಾಗಿ ಆರು ಮತ್ತು ನಾಲ್ಕು ಮಕ್ಕಳಲ್ಲಿ ಶನಿವಾರ ಸೋಂಕು ದೃಢಪಟ್ಟಿದ್ದು, ಜೊತೆಗೆ ಸಿ.ಡಿ ಬಾರ್ಫಿವಾಲಾ ಕಾಲೇಜಿನ 10 ವಿದ್ಯಾರ್ಥಿಗಳಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದ ಹಿನ್ನಲೆಯಲ್ಲಿ ಈ ಎರಡೂ ಶಾಲೆಗಳನ್ನು ಮತ್ತು ಕಾಲೇಜನ್ನು 14 ದಿನಗಳ ಕಾಲ ಮುಚ್ಚುವಂತೆ ಸೂಚನೆ ನೀಡಲಾಗಿದೆ" ಎಂದು ಅಧಿಕಾರಿಗಳು ಹೇಳಿದರು.
ಗುಜರಾತ್ನಲ್ಲಿ ಫೆಬ್ರುವರಿ 2021 ರಂದು ಶಿಕ್ಷಣ ಸಂಸ್ಥೆಗಳನ್ನು ಮರು ತೆರೆಯಲಾಯಿದ್ದು, ಈ ಬಳಿಕ ವಿವಿಧ ಶಿಕ್ಷಣ ಸಂಸ್ಥೆಗಳ 118 ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ ಎಂದು ಉಪ ಆಯುಕ್ತ(ಆರೋಗ್ಯ) ಡಾ. ಆಶಿಷ್ ನಾಯಕ್ ಅವರು ತಿಳಿಸಿದ್ದಾರೆ.
ಇನ್ನು ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಶಿಕ್ಷಣ ಸಂಸ್ಥೆಗಳು ಆದಷ್ಟು ಆನ್ಲೈನ್ ತರಗತಿಗಳನ್ನು ನಡೆಸಬೇಕು. ಸಾಧ್ಯವಾದಲ್ಲಿ ಕ್ಯಾಂಪಸ್ ಅನ್ನು ಮುಚ್ಚಬೇಕು ಎಂದು ಎಸ್ಎಂಸಿ ಮನವಿ ಮಾಡಿದೆ ಎನ್ನಲಾಗಿದೆ.