ಶಿವಮೊಗ್ಗ,ಮಾ. 14 (DaijiworldNews/HR): "ಸರ್ಕಾರ ಬಹಳ ಗಟ್ಟಿ ಚರ್ಮದ್ದು, ಸಾಮಾನ್ಯ ಜ್ಞಾನ ಇರೋರು ಹೀಗೆ ಮಾಡುವುದಿಲ್ಲ. ಘಟನೆ ನಡೆದಾಕ್ಷಣ ಕೊಲೆ ಪ್ರಕರಣ ದಾಖಲಿಸಿದ್ದಾರೆ. ರಾಜಕೀಯಕ್ಕಾಗಿ ಹೀಗೆ ಮಾಡಿದ್ದಾರೆ" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಶಾಸಕ ಸಂಗಮೇಶ್ ಪುತ್ರನ ಬಂಧನ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸುದ್ದಿಗಾರೊಂದಿಗೆ ಮಾತನಾಡಿದ ಅವರು, "ಕಾಂಗ್ರೆಸ್ ಕಾರ್ಯಕರ್ತರ ರಕ್ಷಣೆಗೆ ಆಯೋಜಿಸಿದ್ದ ಜನಾಕ್ರೋಶ ಸಮಾವೇಶ ಯಶಸ್ವಿಯಾಗಿದೆ. ಜಿಲ್ಲೆಯ ಜನರು ಉತ್ತಮ ಸಹಕಾರ ನೀಡಿದ್ದಾರೆ. ಉತ್ಸಾಹದಿಂದ ನೊಂದವರು ಭಾಗಿಯಾಗಿದ್ದಾರೆ. ರಾಜ್ಯದ ಯಾವುದೇ ಕಾರ್ಯಕರ್ತರಿಗೂ ಅಧಿಕಾರ ಬಳಸಿ ಕಿರುಕುಳ ನೀಡಬಾರದು ಎಂಬುದು ನಮ್ಮ ಉದ್ದೇಶ" ಎಂದರು.
"ಶಿವಮೊಗ್ಗ ಬಿಜೆಪಿಯ ಶಕ್ತಿ ಕೇಂದ್ರ ಎನ್ನವುದು ನಮಗೆ ಗೊತ್ತಿದೆ. ಅಂತಗದರಲ್ಲೂ ಪರಿವರ್ತನೆಯಾಗಿ ಜನರು, ವರ್ತಕರು, ಮಹಿಳೆಯರು ಎಲ್ಲರೂ ಬಂದಿದ್ದರು. ಇದು ರಾಜ್ಯದಲ್ಲಿ ಜನರು ಪರವರ್ತನೆ ಅಗುತ್ತಿರುವುದಕ್ಕೆ ಸಾಕ್ಷಿಯಾಗಿದೆ" ಎಂದಿದ್ದಾರೆ.
ಇನ್ನು "ಸರ್ಕಾರ ಬಹಳ ಗಟ್ಟಿ ಚರ್ಮದ್ದು, ಸಾಮಾನ್ಯ ಜ್ಞಾನ ಇರೋರು ಹೀಗೆ ಮಾಡುವುದಿಲ್ಲ. ಘಟನೆ ನಡೆದಾಕ್ಷಣ ಕೊಲೆ ಪ್ರಕರಣ ದಾಖಲಿಸಿದ್ದಾರೆ. ರಾಜಕೀಯಕ್ಕಾಗಿ ಹೀಗೆ ಮಾಡಿದ್ದಾರೆ. ಸದನದಲ್ಲಿ ಕೂಡ ನೊಂದವರಿಗೆ ಮಾತನಾಡಲು ಅವಕಾಶವೇ ನೀಡಲಿಲ್ಲ. ಹಾಗೆಂದು ಸಂಗಮೇಶ್ ಶರ್ಟ್ ಬಿಚ್ಚಿದ್ದು ಸರಿ ಎನ್ನುವುದಿಲ್ಲ, ಅವರು ನೋವನ್ನು ವ್ಯಕ್ತಪಡಿಸಲು ಹೋದರಷ್ಟೇ. ಆದರೆ ತಕ್ಷಣವೇ ಆತನನ್ನು ಕರೆದು ಸಸ್ಪೆಂಡ್ ಮಾಡಿಸಿದ್ದಾರೆ. ಈ ಹಂತಕ್ಕೆ ಯಾರು ಹೋಗಬಾರದು" ಎಂದು ಹೇಳಿದ್ದಾರೆ.