ರಾಯಪುರ, ಮಾ.14 (DaijiworldNews/MB) : ಛತ್ತೀಸ್ಗಢದ ಕಂಕರ್ನಲ್ಲಿರುವ ಹೊಲವೊಂದರಲ್ಲಿ 19 ವರ್ಷದ ಯುವತಿ ಗುಡಿಸಲಿನೊಳಗೆ ಶವವಾಗಿ ಪತ್ತೆಯಾಗಿದ್ದಾಳೆ. ಹದಿಹರೆಯದ ಯುವತಿಯ ದೇಹದಲ್ಲಿ ಹಲವು ಗಾಯಗಳಿದ್ದು ಆಕೆಯ ಮೃತ ದೇಹ ನಗ್ನವಾಗಿ ಲಭಿಸಿದೆ. ಅತ್ಯಾಚಾರ ಮಾಡಿ ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ.
ಯುವತಿ ತನ್ನ ಇಬ್ಬರು ಕಿರಿಯ ಸಹೋದರರು ಮತ್ತು 22 ವರ್ಷದ ಯುವಕನೊಂದಿಗೆ ಹೊಲಕ್ಕೆ ಹೋಗಿದ್ದಳು. ಅವರು ಹೊಲವನ್ನು ತಲುಪಿದಾಗ 22 ವರ್ಷದ ಯುವಕ ಯುವತಿಯ ಇಬ್ಬರು ಸಹೋದರರಲ್ಲಿ ಬೇಲಿಗಳನ್ನು ಸರಿಪಡಿಸುವಂತಹ ಕಾರ್ಯಕ್ಕೆ ಸಹಾಯ ಮಾಡುವಂತೆ ಕೋರಿದ್ದು ಆ ಕೆಲಸ ಮಾಡಿದ್ದರು.
ಬಳಿಕ ಅವರು ಹಿಂದಿರುಗುವಾಗ ಯುವತಿ ನಾಪತ್ತೆಯಾಗಿದ್ದಳು. ಒಮ್ಮಿಂದೊಮ್ಮೆ ಸಹೋದರಿ ಕಾಣಿಯಾದ್ದುದ್ದದರಿಂದಾಗಿ ಆತಂಕಕ್ಕೆ ಒಳಗಾದಾಗ 22 ವರ್ಷದ ಯುವಕನು ನಿಮ್ಮ ಸಹೋದರಿ ಮನೆಗೆ ತೆರಳಿದ್ದಾಳೆ ಎಂದು ತಿಳಿಸಿದನು. ಈ ಹಿನ್ನೆಲೆ ಯುವಕರಿಬ್ಬರು ಮನೆಗೆ ವಾಪಾಸ್ ಬಂದಾಗ ಯುವತಿ ಮನೆಯಲ್ಲಿ ಇಲ್ಲದಿರುವುದನ್ನು ಕಂಡು ತಮ್ಮ ಹೆತ್ತವರೊಂದಿಗೆ ಮತ್ತೆ ಹೊಲಕ್ಕೆ ಹೋಗಿ ಆಕೆಯನ್ನು ಹುಡುಕಿದರು.
ಒಂದು ಗುಡಿಸಲಿನೊಳಗೆ ತಮ್ಮ ಸಹೋದರಿಯ ಚಪ್ಪಲಿಯನ್ನು ಯುವಕರು ನೋಡಿದ್ದು ಒಳಗೆ ಹೋಗಿ ನೋಡಲು ನಿರ್ಧರಿಸಿದರು. ಸಹೋದರಿಬ್ಬರು ಒಳ ಹೋಗಿ ನೋಡಿದಾಗ ಯುವತಿಯ ರಕ್ತಸಿಕ್ತ ನಗ್ನ ದೇಹವನ್ನು ನೋಡಿ ಆಘಾತಕ್ಕೆ ಒಳಗಾಗಿದ್ದಾರೆ.
ಯುವತಿಯ ಮೇಲೆ ಹಲ್ಲೆ ನಡೆಸಲು ಆರೋಪಿಗಳು ತೀಕ್ಷ್ಣವಾದ ಆಯುಧವನ್ನು ಬಳಸಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಘಟನೆ ವರದಿಯಾದಾಗಿನಿಂದ 22 ವರ್ಷದ ಯುವಕನು ನಾಪತ್ತೆಯಾಗಿದ್ದು ಆಕೆ ಅವನೊಂದಿಗೆ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದಾಳೆ.
"ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಮತ್ತು ಒಂದು ತಂಡವು ಆತನನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದೆ. ಸಾಕ್ಷ್ಯಗಳ ಆಧಾರದ ಮೇಲೆ, ಯುವಕ ಈ ಪ್ರಕರಣದಲ್ಲಿ ಪ್ರಮುಖ ಶಂಕಿತ. ಆದರೂ ನಾವು ಆಯಾಮಗಳಲ್ಲಿ ತನಿಖೆ ಮಾಡುತ್ತಿದ್ದೇವೆ'' ಎಂದು ಬಸ್ತಾರ್ನ ಪೊಲೀಸ್ ಇನ್ಸ್ಪೆಕ್ಟರ್ ಜನರಲ್ ಪಿ. ಸುಂದರರಾಜ್ ಹೇಳಿದ್ದಾರೆ.