ಹುಬ್ಬಳ್ಳಿ, ಮಾ. 14 (DaijiworldNews/HR): ಪ್ರೀತಿಸಿ ಕೈಕೊಟ್ಟ ಯುವಕನನ್ನು ಅಪಹರಣ ಮಾಡಿಸಿ ಹಲ್ಲೆ ಮಾಡಿ ಬಳಿಕ ಹಣಕ್ಕೆ ಬೇಡಿಕೆ ಇಟ್ಟ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಅಷ್ಟೆ ಅಲ್ಲದೆ ಫೋಟೋ, ವಿಡಿಯೋ ಬಹಿರಂಗಪಡಿಸುವುದಾಗಿ ಹೆದರಿಸಿ ಜೀವ ಬೆದರಿಕೆ ಹಾಕಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 10 ಜನರ ವಿರುದ್ಧ ಗೋಕುಲ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ತಿಳಿದು ಬಂದಿದೆ.
ಹಲ್ಲೆಗೊಳಗಾದ ಯುವಕನನ್ನು ಲಿಂಗರಾಜ ನಗರದ ಕುಮಾರಸ್ವಾಮಿ ಎಂದು ಗುರುತಿಸಲಾಗಿದೆ.
ಇನ್ನು ಯುವತಿ ಹಾಗೂ ಕುಮಾರಸ್ವಾಮಿ ಪ್ರೀತಿಸುತ್ತಿದ್ದು, ಈ ನಡುವೆ ಕುಮಾರಸ್ವಾಮಿ ಆಕೆಯನ್ನು ತಿರಸ್ಕರಿಸಿದ್ದ. ಇದರಿಂದ ಕೋಪಗೊಂಡ ಯುವತಿ ಆತನನ್ನು ಕಿಡ್ನಾಪ್ ಮಾಡಿಸಿ ಹಲ್ಲೆ ಮಾಡಿಸಿದ್ದಾಳೆ. 5 ಲಕ್ಷ ರೂ. ಕೊಡದಿದ್ದರೆ ಫೋಟೋ, ವಿಡಿಯೋ ಬಹಿರಂಗಪಡಿಸುವುದಾಗಿ ಬೆದರಿಸಿದ್ದಾಳೆ ಎಂದು ದೂರು ನೀಡಲಾಗಿದೆ.