ಶಿವಮೊಗ್ಗ, ಮಾ 13 (DaijiworldNews/MS): "ನಾವೇನೂ ಶ್ರೀರಾಮನ ಭಕ್ತರಲ್ಲವೇ ? , ಶಿವಕುಮಾರ ಎಂದು ಶಿವನ ಮಗನ ಹೆಸರು ಇಟ್ಟುಕೊಂಡಿದ್ದೇನೆ, ನಾವು ಕೂಡ ಹಿಂದುಗಳೇ, ನನ್ನ ಹೆಸರಲ್ಲಿ ಶಿವ.. ಸಿದ್ದರಾಮಯ್ಯ ಹೆಸರಲ್ಲಿ ರಾಮ ಇಲ್ವಾ" ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಹೇಳಿದ್ದಾರೆ.
ಶಿವಮೊಗ್ಗ ಚಲೋ ಕಾರ್ಯಕ್ರಮದಲ್ಲಿ ಮಾತನಾಡಿದ , ಶಿವಕುಮಾರ್ " ಬಿಜೆಪಿಯವರು ಅವರು ಹಿಂದುಗಳು ಮುಂದು ಅಂತಾರೆ, ನಾವು ಎಲ್ಲರು ಒಂದು ಎನ್ನುತ್ತೇವೆ ಇದೇ ನಮಗೂ ಅವರಿಗೂ ಇರುವ ವ್ಯತ್ಯಾಸ. ತ್ರಿವರ್ಣ ದ್ವಜವೇ ನಮ್ಮ ಧರ್ಮ , ಭಾರತ್ ಮಾತಕೀ ಜೈ ಅನ್ನೋದೇ ನಮ್ಮ ಘೋಷಣೆ ಎಂದು ಸ್ಪಷ್ಟಪಡಿಸಿದ್ದಾರೆ.
ಶಿವಕುಮಾರ್ ಅವರ ಈ ಹೇಳಿಕೆಗೆ ರಾಜ್ಯ ಬಿಜೆಪಿ ಟ್ವೀಟ್ ಮಾಡಿ " ನನ್ನ ಹೆಸರಿನಲ್ಲೂ ರಾಮನಿದ್ದಾನೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ.
ನಾವೂ ರಾಮ ಭಕ್ತರೇ ಎಂದು ಡಿ.ಕೆ ಶಿವಕುಮಾರ್ ಎನ್ನುತ್ತಾರೆ. ಆದರೆ ಶಾಸಕ ಸಂಗಮೇಶ್ ಅವರ ಕುಟುಂಬ ಜೈ ಶ್ರೀ ರಾಮ್ ಘೋಷಣೆ ಕೂಗಿದವರ ಮೇಲೆ ಹಲ್ಲೆ ನಡೆಸಿದಾಗ, ಸಂಗಮೇಶ್ ಪರವಾಗಿ ನಿಲ್ಲುತ್ತಾರೆ. ಶ್ರೀರಾಮ ನಾಮದ ಬಗ್ಗೆ ನಿಮಗೇಕಿಷ್ಟು ತಿರಸ್ಕಾರ? ಎಂದು ಪ್ರಶ್ನಿಸಿದೆ.
ಅಲ್ಲದೆ ಮತ್ತೊಂದು ಟ್ವೀಟ್ ಮಾಡಿ ಕಾಂಗ್ರೆಸ್ ಪಕ್ಷದ ಮಲತಾಯಿ ಧೋರಣೆಯ ದೃಷ್ಟಾಂತಗಳು ಬೇಕಾದಷ್ಟಿವೆ, ಶಾಸಕನ ಪುತ್ರ ಜಾತಿ ನಿಂದನೆ ಆರೋಪದಲ್ಲಿ ಬಂಧನವಾಗಿರುವುದಕ್ಕೆ ಶಿವಮೊಗ್ಗ ಚಲೋ ಮಾಡುತ್ತಿದ್ದಾರೆ.ಆದರೆ ಮತಾಂಧರು ಅಖಂಡ ಅವರ ಮನೆ ಸುಟ್ಟಾಗ ಡಿಜೆ ಹಳ್ಳಿ ಚಲೋ ಮಾಡಲು ಮನಸೇ ಬರಲಿಲ್ಲ.
ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ! ಎಂದು ವ್ಯಂಗ್ಯವಾಡಿದೆ.