ಬೆಂಗಳೂರು, ಮಾ.13 (DaijiworldNews/HR): "ಎಂತಹ ಸಂದರ್ಭದಲ್ಲೂ ನಾವೆಲ್ಲರೂ ರಮೇಶ್ ಜಾರಕಿಹೊಳಿ ಜೊತೆಗಿದ್ದೇವೆ, ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ ನಡೆಯಲಿ ಬಿಡಿ" ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಹೇಳಿದ್ದಾರೆ.
ಈ ಕುರಿತು ಸಚಿವ ಸುಧಾಕರ್ ಅವರ ಸದಾಶಿವನಗರದ ನಿವಾಸಕ್ಕೆ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಮೇಶ್ ಜಾರಕಿಹೊಳಿ ಅವರ ಸಿ.ಡಿ ಬಿಡುಗಡೆ ಕುರಿತ ವಿಚಾರಣೆ ನಡೇಸಲು ಎಸ್ಐಟಿಗೆ ವಹಿಸಿದ್ದು, ಆದಷ್ಟು ಬೇಗ ಸತ್ಯಾಂಶ ಹೊರೆ ಬೀಳಲಿದೆ" ಎಂದರು.
ಇನ್ನು "ಸುಧಾಕರ್ ಅವರು ವ್ಯಾಕ್ಸಿನ್ ಪಡೆದಿದ್ದು, ಅದಕ್ಕೆ ಅವರ ಆರೋಗ್ಯ ವಿಚಾರಿಸಲು ಬಂದಿದ್ದೆ. ಅವರು ಆರೋಗ್ಯವಾಗಿದ್ದಾರೆ, ಸ್ವಲ್ಪ ಜ್ವರವಿದೆ" ಎಂದು ಹೇಳಿದ್ದಾರೆ.