ಛತ್ತೀಸ್ಗಢ, ಮಾ.13 (DaijiworldNews/MB): ಛತ್ತೀಸ್ಗಢ ಪೊಲೀಸರು 13 ಮಂದಿ ಮಂಗಳಮುಖಿಯರನ್ನು ಕಾನ್ಸ್ಟೆಬಲ್ಗಳಾಗಿ ನೇಮಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಮಂಗಳಮುಖಿಯೋರ್ವರು ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.
''ಇದು ಒಂದು ದೊಡ್ಡ ಅವಕಾಶವಾಗಿದೆ. ನಾವು ಪೊಲೀಸ್ ಇಲಾಖೆಗೆ ಧನ್ಯವಾದ ಹೇಳಲು ಬಯಸುತ್ತೇವೆ. ಇದರಿಂದಾಗಿ ಜನರು ನಮ್ಮ ಸಮುದಾಯವನ್ನು ನೋಡುವ ರೀತಿಯಲ್ಲಿ ಬದಲಾವಣೆಯಾಗುತ್ತದೆ'' ಎಂದು ಕಾನ್ಸ್ಟೆಬಲ್ ಆಗಿ ನೇಮಕಗೊಂಡಿರುವ ಮಂಗಳಮುಖಿ ಸೋನಿಯಾ ಹೇಳಿದ್ದಾರೆ.
ಇನ್ನು, ''ನಾವು ಮಂಗಳಮುಖಿಯರನ್ನು ನಮ್ಮ ಇಲಾಖೆಗೆ ಸ್ವಾಗತಿಸುತ್ತೇವೆ. ಭವಿಷ್ಯದಲ್ಲಿ ಇನ್ನು ಅಧಿಕ ಮಂಗಳಮುಖಿಯರು ನೇಮಕವಾಗಲಿ ಎಂಬುದು ನಮ್ಮ ಅಭಿಲಾಷೆ. ಮೆರಿಟ್ ಆಧಾರದಲ್ಲಿ ಈ 13 ಮಂದಿ ಮಂಗಳಮುಖಿಯರು ಕಾನ್ಸ್ಟೆಬಲ್ ಆಗಿ ನೇಮಕಗೊಂಡಿದ್ದಾರೆ'' ಎಂದು ಛತ್ತೀಸ್ಗಢ ಡಿಜಿಪಿ ಡಿ.ಎಂ. ಅವಸ್ತಿ ತಿಳಿಸಿದ್ದಾರೆ.