ಬೆಂಗಳೂರು, ಮಾ.13 (DaijiworldNews/MB): ರಾಸಲೀಲೆ ಸಿಡಿ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿ ಪರವಾಗಿ ಅವರ ಸಹೋದರ ಬಾಲಚಂದ್ರ ಜಾರಕಿಹೊಳಿ ಬ್ಯಾಟ್ ಬೀಸಿದ್ದು, ನಾವು ಖಾಸಗಿಯಾಗಿಯೇ ಸಾಕ್ಷ್ಯಾಧಾರಗಳ ಸಂಗ್ರಹದಲ್ಲಿ ತೊಡಗಿದ್ದೇವೆ. ಅಷ್ಟಕ್ಕೂ ನಾವು ಗಾಳಿಯಲ್ಲಿ ಗುಂಡು ಹೊಡೆಯುವವರಲ್ಲ, ಕಾನೂನು ಹೋರಾಟದಿಂದ ಹಿಂದೆ ಸರಿಯಲ್ಲ ಎಂದು ಹೇಳಿದರು.
ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ''ನಾನು ರಮೇಶ್ ಚರ್ಚೆ ನಡೆಸಿದ್ದೇವೆ. ಸಾಕ್ಷ್ಯಗಳ ಸಂಗ್ರಹದಲ್ಲಿ ತೊಡಗಿದ್ದು ಆದಷ್ಟು ಬೇಗ ದೂರು ನೀಡುವ ಯೋಚನೆ ಮಾಡಿದ್ದೇವೆ. ನಮಗೆ ಯುವತಿ ಜೊತೆ ಇರುವ ಫೋಟೋ ನಮಗೆ ಲಭ್ಯವಾಗಿದೆ. ಪಕ್ಕಾ ಎವಿಡೆನ್ಸ್ ಸಂಗ್ರಹಿಸಿಯೆ ನಾವು ದೂರು ನೀಡುವುದು'' ಎಂದರು.
''ಸೋಮವಾರ ಇಬ್ಬರು, ಮೂವರ ವಿರುದ್ದ ದೂರು ನೀಡುತ್ತೇವೆ. ನಾವು ಕಿಂಗ್ಪಿನ್ಗಳ ಬಗ್ಗೆ ನಾವು ಆದಷ್ಟು ಬೇಗ ದೂರು ನೀಡಲಿದ್ದೇವೆ. ಕಿಂಗ್ಪಿನ್ಗಳಿಗೆ ಸಹಕರಿಸಿದ್ದವರನ್ನು ವಶಕ್ಕೆ ಪಡೆದಿದ್ದಾರೆ. ಆದರೆ ಇನ್ನಷ್ಟೇ ದೊಡ್ಡ ತಿಮಿಂಗಿಲಗಳನ್ನು ನಾವು ವಶಕ್ಕೆ ಪಡೆದಿಲ್ಲ, ಅವೂ ಬಲೆಗೆ ಬೀಲುತ್ತೆ'' ಎಂದು ಹೇಳಿದರು.
''ಆರೋಪಿಗಳಿಗೆ ಬುದ್ದಿ ಕಲಿಸಬೇಕೆಂದಾದರೆ ಎಲ್ಲರನ್ನೂ ಬಂಧಿಸಿ ಜೈಲಿಗಟ್ಟಬೇಕು. ನಾನು ಆದಷ್ಟು ಬೇಗ ದೂರು ನೀಡುತ್ತೇವೆ'' ತಿಳಿಸಿದರು.
ಇನ್ನು ರಮೇಶ್ ಜಾರಕಿಹೊಳಿ ಹಾಗೂ ಬಾಲಚಂದ್ರ ಅವರು ಶನಿವಾರ ಸಂಜೆ ದೆಹಲಿಗೆ ಹೋಗಿ ಅಲ್ಲಿ ಪಕ್ಷದ ಪ್ರಮುಖರನ್ನು ಭೇಟಿಯಾಗುವ ಸಾಧ್ಯತೆಯಿದೆ. ಸದ್ಯ ರಮೇಶ್ ಅಸ್ಸಾಂನಲ್ಲಿದ್ದು, ಬಾಲಚಂದ್ರ ಮಹಾರಾಷ್ಟ್ರದ ನಾಗ್ಪುರದಲ್ಲಿದ್ದಾರೆ. ದೆಹಲಿಯಲ್ಲಿ ವಕೀಲರೊಂದಿಗೆ ಮಾತುಕತೆ ನಡೆಸಿ ಬಳಿಕ ಇಲ್ಲಿಗೆ ಬಂದು ಅವರು ದೂರು ನೀಡುವ ಸಾಧ್ಯತೆಯಿದೆ.