ಧಾರವಾಡ, ಮಾ.12 (DaijiworldNews/HR): "ರಮೇಶ್ ಜಾರಕಿಹೊಳಿ ಕುರಿತು ಬಿಡುಗಡೆಯಾದ ರಾಸಲೀಲೆ ವಿಡಿಯೋ ನಕಲಿ ಎಂದು ಅವರೇ ಸ್ಪಷ್ಟಪಡಿಸಿದ್ದು, ಈ ಬಗ್ಗೆ ತನಿಖೆಗೂ ಕೂಡ ಸರ್ಕಾರ ಸೂಚಿಸಿದೆ. ಆದಷ್ಟು ಬೇಗ ರಮೇಶ್ ಆರೋಪ ಮುಕ್ತರಾಗಿ ಹೊರ ಬರುತ್ತಾರೆ" ಎಂದು ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ಮುರುಗೇಶ ನಿರಾಣಿ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಗೃಹ ಇಲಾಖೆಗೆ ತನ್ನದೇ ಆದ ರೀತಿ, ನಿಯಮಗಳಿರುತ್ತವೆ ಆ ಪ್ರಕಾರ ತನಿಖೆ ನಡೆಸುತ್ತದೆ. ರಮೇಶ್ ಅವರು ಆರೋಪ ಮುಕ್ತರಾಗಿ ಹೊರ ಬಂದರೆ ಅವರಿಗೆ ಸಚಿವ ಸ್ಥಾನ ನೀಡಬೇಕೋ ಬೇಡವೋ ಎಂಬುದು ಮುಖ್ಯಮಂತ್ರಿಗೆ ಬಿಟ್ಟ ವಿಚಾರ" ಎಂದರು.
ಇನ್ನು ಪಂಚಮಸಾಲಿ ಲಿಂಗಾಯತ ಸಮಾಜಕ್ಕೆ 2ಎ ಮೀಸಲಾತಿ ವಿಚಾರದ ಕುರಿತು ಮಾತನಾಡಿದ ಅವರು, "ಪಂಚಮಸಾಲಿ ಲಿಂಗಾಯತ ಸಮಾಜಕ್ಕೆ 2ಎ ಮೀಸಲಾತಿ ಸಿಗಬೇಕು ಎಂಬುದು ನನ್ನ ಅಭಿಪ್ರಾಯವೂ ಹೌದು. ಈ ಬಗ್ಗೆ ಹಿಂದುಳಿದ ಆಯೋಗ ಸ್ಪಷ್ಟವಾಗಿ ಅಧ್ಯಯನ ನಡೆಸಿ ವರದಿ ನೀಡಲು ಈಗಾಗಲೇ ಸರ್ಕಾರ ಸೂಚನೆ ನೀಡಿದೆ. ಇದು ಆದಷ್ಟು ಬೇಗ ಆಗಲಿದೆ. ನಮ್ಮ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರ ಹಾಗೆ ಹೆಲಿಕಾಪ್ಟರ್ ನಲ್ಲಿ ಅಡ್ಡಾಡುವವರು ನಮ್ಮಲ್ಲಿಲ್ಲ" ಎಂದು ಹೇಳಿದ್ದಾರೆ.