ತಿರುವನಂತಪುರಂ, ಮಾ.12 (DaijiworldNews/HR): ಸ್ಕೂಟಿಯೊಂದರಲ್ಲಿ ಕೊಲ್ಲಂನ ಚಿನ್ನಕಡ ನಿವಾಸಿಯೊಬ್ಬರು ಕಾಂಗರೂ ಬ್ಯಾಗಿನಲ್ಲಿ ಮಗಳನ್ನು ಎದೆಗವಚಿಕೊಂಡು, ಸ್ವಿಗ್ಗಿ ಡೆಲಿವರಿ ಮಾಡುತ್ತಿದ್ದ ಮಹಿಳೆಯ ವಿಡಿಯೋ ವೈರಲ್ ಆಗುತ್ತಿದೆ.
"ನನ್ನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವುದೂ ನನಗೆ ಗೊತ್ತಿಲ್ಲ, ನನ್ನ ಸ್ನೇಹಿತೆ ವಿಡಿಯೋ ತೋರಿಸಿದಾಗ ಒಮ್ಮೆ ಆಶ್ಚರ್ಯವಾಯಿತು, ಬಳಿಕ ಒಂದೊಮ್ಮೆ ಕೆಲಸ ಕಳೆದುಕೊಂಡರೆ ಕಷ್ಟ ಅಂತಲೂ ಅನಿಸಿದ್ದು ನಿಜ" ಎಂದು ಮಹಿಳೆ ಹೇಳಿಕೊಂಡಿದ್ದಾರೆ.
ಇನ್ನು "ಮಗಳು ವಾರ ಇಡೀ ಡೇ ಕೇರ್ನಲ್ಲಿಯೇ ಕಾಲ ಕಳೆಯುತ್ತಾಳೆ, ಭಾನುವಾರ ಮಾತ್ರ ಡೇ ಕೇರ್ಗೆ ರಜೆ ಇರುವ ಕಾರಣ ಮಗಳನ್ನು ಕರೆದುಕೊಂಡು ಸ್ವಿಗ್ಗಿ ಡೆಲಿವರಿ ಮಾಡುತ್ತೇನೆ" ಎಂದು ಹೇಳಿದ್ದಾರೆ.
"ಕೊಚ್ಚಿಗೆ ಬಂದು ನಾಲ್ಕು ವರ್ಷವಾಗಿದ್ದು, ಮದುವೆಗೆ ಮನೆಯವರ ವಿರೋಧವಿತ್ತು, ಹಾಗಾಗಿ ಯಾರೂ ಕೂಡ ನಮ್ಮನ್ನು ನೋಡಲು ಬರುವುದಿಲ್ಲ, ಪತಿ ಗಲ್ಫ್ನಲ್ಲಿ ಕೆಲಸ ನಿರ್ವಹಿಸುತ್ತಿದ್ದು, ತಿಂಗಳಿಗೆ ಅಷ್ಟೋ ಇಷ್ಟೋ ಹಣ ಕಳುಹಿಸುತ್ತಾರೆ, ಆದರೆ ಅದು ಸಾಲುತ್ತಿಲ್ಲ ನು ಓದು ಮುಂದುವರೆಸಿದ್ದೇನೆ ಅದಕ್ಕೂ ಹಣದ ಅವಶ್ಯಕತೆ ಇದೆ ಹಾಗಾಗಿ ನಾನು ಈ ಕೆಲಸವನ್ನು ಆಯ್ಕೆ ಮಾಡಿಕೊಂಡಿದ್ದೇನೆ" ಎಂದು ತಿಳಿಸಿದ್ದಾರೆ.