ಹಲ್ದಿಯಾ, ಮಾ.12 (DaijiworldNews/PY): ಪಶ್ಚಿಮಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರು, ಪ್ರಧಾನಿ ಮೋದಿ ಅವರು ಆರಂಭಿಸಿದ ಹಲವು ಯೋಜನೆಗಳ ಹೆಸರನ್ನು ಬದಲಾಯಿಸಿ ಅವರು ತಮ್ಮ ಯೋಜನೆಯೆಂದು ಸುಳ್ಳು ಹೇಳಿ ಪ್ರಚಾರ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಆರೋಪಿಸಿದ್ದಾರೆ.
"ಕೇಂದ್ರ ಪ್ರಾರಂಭಿಸಿದ ಯೋಜನೆಗಳ ಪೋಸ್ಟರ್ಗಳಲ್ಲಿ ತಮ್ಮ ಫೋಟೋಗಳನ್ನು ಹಾಕಿಕೊಳ್ಳುವ ಮೂಲಕ ಹೆಸರು ಮಾಡಲು ಪ್ರಯತ್ನಿಸುತ್ತಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"80 ವರ್ಷದ ತಾಯಿಯ ಮೇಲೆ ಹಿಂಸಾಚಾರ ಮಾಡುವ ಇಂತಹ ಮಕ್ಕಳಿಗೆ ರಾಜ್ಯದ ಜನರು ಮತ ಚಲಾಯಿಸುತ್ತಾರಾ?. ಬಿಜೆಪಿ ಕಾರ್ಯಕರ್ತರನ್ನು ಗಲ್ಲಿಗೇರಿಸುವ ಇಂತಹ ಮಗಳಿಗೆ ನೀವು ಮತ ಹಾಕುತ್ತೀರಾ?. ರಾಜ್ಯದ ಜನತೆ ನಿಜವಾದ ಬದಲಾವಣೆಗಾಗಿ ನಿರೀಕ್ಷಿಸುತ್ತಿದ್ದಾರೆ" ಎಂದಿದ್ದಾರೆ.
"ಪಿಎಂ-ಕಿಸಾನ್ ಯೋಜನೆ ಸೇರಿ ಕೇಂದ್ರದ ಹಲವಾರು ಯೋಜನೆಗಳ ಪ್ರಯೋಜನಗಳು, ಟಿಎಂಸಿಯ ಕೆಟ್ಟ ರಾಜನೀತಿಯ ಕಾರಣದಿಂದ ಬಂಗಾಳದ ಜನತೆ ಸರಿಯಾಗಿ ತಲುಪುತ್ತಿಲ್ಲ" ಎಂದು ಹೇಳಿದ್ದಾರೆ.
"ಪ್ರಧಾನಿ ನರೇಂದ್ರ ಮೋದಿ ಅವರು ಜನಸಾಮಾನ್ಯರ ಹಿತಕ್ಕಾಗಿ ಹಗಲಿರುಳು ದುಡಿಯುತ್ತಿದ್ದಾರೆ. ಮತ್ತೊಂದೆಡೆ ದೀದಿ ಫೋಟೋ ಕ್ಲಿಕ್ಕಿಸುವಲ್ಲಿ ತಲ್ಲೀನರಾಗಿದ್ದು, ಕೇಂದ್ರ ಸರ್ಕಾರದ ಯೋಜನೆಗಳನ್ನು ತಮ್ಮ ಯೋಜನೆಯೆಂದು ಹೇಳುತ್ತಾ ಹೆಸರು ಮಾಡಲು ಯತ್ನಿಸುತ್ತಿದ್ದಾರೆ" ಎಂದು ಆರೋಪಿಸಿದ್ದಾರೆ.