ಬೆಂಗಳೂರು, ಮಾ.12 (DaijiworldNews/HR): ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣವನ್ನು ಸೌಮೇಂದ್ರ ಮುಖರ್ಜಿ ನೇತೃತ್ವದ ಎಸ್ಐಟಿ ತಂಡ ತನಿಖೆಯನ್ನು ಆರಂಭಿಸಿದ್ದು, ಯುವತಿ ಸೇರಿ ನಾಲ್ವರನ್ನು ಎಸ್ಐಟಿ ತಂಡ ವಶಕ್ಕೆ ಪಡೆದುಕೊಂಡಿದೆ.
ಬೆಂಗಳೂರಿನಲ್ಲಿ ಇಬ್ಬರು ಹಾಗೂ ಅಲ್ದೂರಿನ ಮೂಲದ ಯುವಕನನ್ನು ತಂಡ ವಶಕ್ಕೆ ಪಡೆದುಕೊಂಡಿದೆ. ಈ ಪೈಕಿ ಇಬ್ಬರು ಪತ್ರಕರ್ತ ಹಿನ್ನೆಲೆಯುಳ್ಳವರು ಎಂದು ತಿಳಿದುಬಂದಿದೆ.
ಕಬ್ಬನ್ ಪಾರ್ಕ್ ಪೊಲೀಸರ ತನಿಖೆಯಲ್ಲಿ ಕೆಲವು ಮಾಹಿತಿ ದೊರೆತಿದ್ದು, ಈ ಮಾಹಿತಿಯನ್ನು ಆಧರಿಸಿ ತಂಡ ಇಬ್ಬರು ಶಂಕಿತ ಆರೋಪಿಗಳನ್ನ ವಶಕ್ಕೆ ಪಡೆದಿದೆ.
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಎಸ್ಐಟಿ ತನಿಖೆಗೆ ಆದೇಶಿದ್ದು, ತನಿಖೆಯ ನೇತೃತ್ವವವನ್ನು ಸೌಮೇಂದ್ರ ಮುಖರ್ಜಿ ನೇತೃತ್ವದ ತಂಡಕ್ಕೆ ವಹಿಸಿತ್ತು.