ನವದೆಹಲಿ, ಮಾ12 (DaijiworldNews/MS): ಕೇಂದ್ರ ಹಣಕಾಸು ಮತ್ತು ಸಂಸ್ಥಿಕ ವ್ಯಹಾರಗಳ ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್, ಭಾರತೀಯ ಸೇನೆಯ ಅಂಗವಾದ ಪ್ರಾದೇಶಿಕ ಸೇನೆಯಲ್ಲಿ ಕ್ಯಾಪ್ಟನ್ ಆಗಿ ಬಡ್ತಿ ಪಡೆದಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ನಡೆದ ಸಮಾರಂಭದಲ್ಲಿ ಅನುರಾಗ್ ಠಾಕೂರ್ ಅವರಿಗೆ ಪ್ರಾದೇಶಿಕ ಸೈನ್ಯದ ಕ್ಯಾಪ್ಟನ್ ರ್ಯಾಂಕ್ಗಳನ್ನು ತೊಡಿಸಲಾಯಿತು. 2016ರಲ್ಲಿ ಆಗಿನ ಸೇನಾ ಮುಖ್ಯಸ್ಥ (ಸಿಒಎಎಸ್) ಜನರಲ್ ದಲ್ಬೀರ್ ಎಸ್ ಸುಹಾಗ್ ಅವರು ಅನುರಾಗ್ ಠಾಕೂರ್ ರನ್ನು ಲೆಫ್ಟಿನೆಂಟ್ ಆಗಿ ಪ್ರಾದೇಶಿಕ ಸೈನ್ಯಕ್ಕೆ ನಿಯೋಜಿಸಿದ್ದರು
ಈ ಕುರಿತು ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿರುವ ಅನುರಾಗ್ ಠಾಕೂರ್, ಪ್ರಾದೇಶಿಕ ಸೈನ್ಯದ 124ನೇ ಇನ್ಫೆಂಟ್ರಿ ಬಟಾಲಿಯನ್(ಸಿಖ್)ನ ಕ್ಯಾಪ್ಟನ್ ಆಗಿ ಬಡ್ತಿ ಪಡೆದಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ. ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ನನ್ನ ಕುಟುಂಬದಿಂದ ಇದು ಮೂರನೇ ತಲೆಮಾರಿನವರು. ಸೈನ್ಯ ಮತ್ತು ಸಂಸತ್ತು ಎರಡರಲ್ಲೂ ಭಾಗಿಯಾಗಿರುವುದು ಗೌರವ. ಎಂದು ಹೇಳಿದ್ದಾರೆ.
ಪ್ರಾದೇಶಿಕ ಸೈನ್ಯದಲ್ಲಿ ರೆಗ್ಯೂಲರ್ ಕಮಿಷನ್ಡ್ ಆಫೀಸರ್ ಆಗಿ ನೇಮಕಗೊಂಡ ಮೊದಲ ಕೇಂದ್ರ ಸಚಿವ ಎಂಬ ಹೆಗ್ಗಳಿಕೆ ಅನುರಾಗ್ ಠಾಕೂರ್ ಭಾಜನರಾಗಿದ್ದಾರೆ.