ನವದೆಹಲಿ, ಮಾ12 (DaijiworldNews/MS): ದೇಶದಲ್ಲಿ ಕೊರೊನಾ ಸಾಂಕ್ರಮಿಕ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶ ಪ್ರವಾಸ ಕೈಗೊಳ್ಳುತ್ತಿದ್ದು, ಮಾರ್ಚ್ 26ಕ್ಕೆ ನೆರೆಯ ಬಾಂಗ್ಲಾದೇಶಕ್ಕೆ ಭೇಟಿ ನೀಡಲಿದ್ದಾರೆ.
ಮಾರ್ಚ್ 26 ರಂದು ಬಾಂಗ್ಲಾದೇಶದವು 50ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿದೆ. 1971ರಲ್ಲಿ ಸ್ವಾತಂತ್ರ್ಯ ಪಡೆದ ಬಾಂಗ್ಲಾದೇಶ ಪಾಕಿಸ್ತಾನದಿಂದ ವಿಮೋಚನೆಗೊಂಡಿತ್ತು. ಈ ಸಂದರ್ಭ ಬಾಂಗ್ಲಾದೇಶಕ್ಕೆ ಭಾರತ ನೆರವು ನೀಡಿತ್ತು. ಭಾರತದ ನೆರವಿನಿಂದ ಬಾಂಗ್ಲಾದೇಶ ಸೇನೆ ಮುಂದೆ ಪಾಕಿಸ್ತಾನ ಶರಣಾಗಿತ್ತು. ಡಿಸೆಂಬರ್ 16, 1971ರಲ್ಲಿ ಪಾಕಿಸ್ತಾನ ಶರಣಾಗಿತ್ತು.
ಗೋಲ್ಡನ್ ಜುಬಿಲಿ ಸ್ವಾತಂತ್ರ್ಯ ಆಚರಣೆಯ ಸಂದರ್ಭದಲ್ಲಿ ಬಾಂಗ್ಲಾದೇಶ ಪ್ರಧಾನಿ ಶೇಕ್ ಹಸಿನಾ ಪ್ರಧಾನಿ ನರೇಂದ್ರ ಮೋದಿಗೆ ಮುಖ್ಯ ಅತಿಥಿಯಾಗಿ ಆಹ್ವಾನ ನೀಡಿದ್ದಾರೆ. ಹೀಗಾಗಿ ಮೋದಿ 2 ದಿನದ ಢಾಕಾ ಪ್ರವಾಸ ಕೈಗೊಳ್ಳಲಿದ್ದಾರೆಂದು ಹೇಳಲಾಗುತ್ತಿದೆ. 15 ತಿಂಗಳ ಬಳಿಕ ಮೋದಿ ಕೈಗೊಳ್ಳುತ್ತಿರುವ ವಿದೇಶ ಭೇಟಿಯಾಗಿದೆ
2020ರ ನವೆಂಬರ್ ಬಳಿಕ ಪ್ರಧಾನಿ ಮೋದಿ ಯಾವುದೇ ದೇಶಕ್ಕೆ ಪ್ರಯಾಣ ಮಾಡಿರಲಿಲ್ಲ.