ಪಶ್ಚಿಮ ಬಂಗಾಳ, ಮಾ.12 (DaijiworldNews/HR): ತೃಣಮೂಲ ಪಕ್ಷದ ಅಧ್ಯಕ್ಷೆ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆಸ್ತಿ ವಿವರಗಳನ್ನು ಘೋಷಿಸಲಾಗಿದ್ದು, ಒಟ್ಟು 16.72 ಲಕ್ಷ ರೂ. ಆಸ್ತಿ ಹೊಂದಿದ್ದೇನೆ ಎಂದು ಚುನಾವಣಾ ಆಯೋಗಕ್ಕೆ ಅಫಿಡವಿಟ್ ಸಲ್ಲಿಸಿದ್ದಾರೆ ಎನ್ನಲಾಗಿದೆ.
ಚುನಾವಣಾ ಪ್ರಚಾರದ ಸಂದರ್ಭದಲ್ಲಿ ನನ್ನ ಮೇಲೆ ಹಲ್ಲೆಯಾಗಿದೆ ಎಂದು ಆರೋಪಿಸಿರುವ ಮಮತಾ ಅವರು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಪೂರ್ವ ಮೇದಿನಿಪುರದ ನಂದಿಗ್ರಾಮ ಕ್ಷೇತ್ರದಲ್ಲಿ ಏಪ್ರಿಲ್ 1ರಂದು ಮತದಾನ ನಡೆಯಲಿದ್ದು, ಪಶ್ಚಿಮ ಬಂಗಾಳದಲ್ಲಿ 8 ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೇ 2 ರಂದು ಫಲಿತಾಂಶ ಹೊರ ಬರಲಿದೆ.
ಮಮತಾ ಘೋಷಿತ ಆಸ್ತಿ ವಿವರ:
* 2019-20ನೇ ಸಾಲಿನಲ್ಲಿ ಆದಾಯಗಳಿಕೆ 10,34, 370 ರು ನಷ್ಟಿತ್ತು. 69, 255 ರು ನಗದು ಹೊಂದಿದ್ದಾರೆ.
* ಬ್ಯಾಂಕ್ ಬ್ಯಾಲೆನ್ಸ್ 13.53 ಲಕ್ಷ ರೂ. ಇದ್ದು, ಅದರಲ್ಲಿ 1.51 ಲಕ್ಷ ರು ಚುನಾವಣಾ ಖರ್ಚು ವೆಚ್ಚಕ್ಕೆ ಬಳಕೆಯಾಗುತ್ತಿದೆ.
* ಇನ್ನು ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ ಖಾತೆಯಲ್ಲಿ 18,940ರೂ. ಹೊಂದಿದ್ದು, 2019-20 ನೇ ಸಾಲಿನಲ್ಲಿ 1.85 ಲಕ್ಷ ರು ಟಿಡಿಎಸ್ ಕಡಿತಗೊಂಡಿದೆ ಎಂದು ಅಫಿಡವಿಟ್ನಲ್ಲಿ ಹೇಳಿದ್ದಾರೆ.
* ಮಮತಾ ವಿರುದ್ಧ ಯಾವುದೇ ಕ್ರಿಮಿನಲ್ ಕೇಸ್ ದಾಖಲಾಗಿಲ್ಲ. 43,837 ರು ಮೌಲ್ಯದ ಚಿನ್ನಾಭರಣ ಹೊಂದಿದ್ದಾರೆ ಎನ್ನಲಾಗಿದೆ.