ನವದೆಹಲಿ, ಮಾ.12 (DaijiworldNews/HR): ಬ್ಯಾಂಕಿಂಗ್ ಕೆಲಸಗಳು ಇದ್ದರೆ ಇಂದೇ ಮುಗಿಸಿಕೊಳ್ಳುವುದು ಒಳ್ಳೆಯದು, ಯಾಕೆಂದರೆ ಮಾರ್ಚ್.13 ರಿಂದ ನಾಲ್ಕು ದಿನಗಳ ಕಾಲ ಬ್ಯಾಂಕ್ ಸೇವೆಗಳು ಬಂದ್ ಆಗಲಿವೆ.
ಸಾಂಧರ್ಭಿಕ ಚಿತ್ರ
ಮಾರ್ಚ್.13ರಂದು ಎರಡನೇ ಶನಿವಾರದ, ಮಾ.14ರಂದು ರವಿವಾರ ಹಾಗೂ ಮಾ.15 ಮತ್ತು 16ರಂದು ಬ್ಯಾಂಕಿಂಗ್ ವಲಯದ ಖಾಸಗೀಕರಣ ವಿರೋಧಿಸಿ ಬ್ಯಾಂಕ್ ಗಳ ಒಕ್ಕೂಟ ರಾಷ್ಟ್ರೀಯ ಬಂದ್ ಗೆ ಕರೆ ನೀಡಿದ್ದು, ಬ್ಯಾಂಕ್ ಸೇವೆಗಳು ನಿರಂತರ ನಾಲ್ಕು ದಿನಗಳ ಕಾಲ ಬಂದ್ ಇರಲಿದೆ.
ಇನ್ನು ಬ್ಯಾಂಕಿಂಗ್ ವಲಯದ ಖಾಸಗೀಕರಣಗೊಳಿಸುವ ಕೇಂದ್ರ ಸರಕಾರದ ನಿರ್ಧಾರವನ್ನು ವಿರೋಧಿಸಿ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ಮಾ.15 ಮತ್ತು 16ರಂದು ದೇಶಾದ್ಯಂತ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿದೆ ಎನ್ನಲಾಗಿದೆ.