ನವದೆಹಲಿ, ಮಾ12 (DaijiworldNews/MS): ಪಕ್ಷಾಂತರದಿಂದಾಗಿ 2016-2020ರ ಅವಧಿಯಲ್ಲಿ ನಡೆದ ಚುನಾವಣೆಯಲ್ಲಿ 170 ಶಾಸಕರು ಕಾಂಗ್ರೆಸ್ ಗೆ ಕೈ ಕೊಟ್ಟು ಬೇರೆ ಪಕ್ಷ ಗಳನ್ನು ಸೇರಿಕೊಂಡಿದ್ದು, ಇದೇ ಅವಧಿಯಲ್ಲಿ 18 ಬಿಜೆಪಿ ಶಾಸಕರು ಮಾತ್ರ ಪಕ್ಷ ಬದಲಾಯಿಸಿ ಚುನಾವಣೆಗೆ ಸ್ಪರ್ಧಿಸಿದ್ದಾರೆ ಎಂದು ಚುನಾವಣಾ ಹಕ್ಕು ಗಳ ಗುಂಪು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವರದಿ ತಿಳಿಸಿದೆ.
2016-2020ರ ಅವಧಿಯಲ್ಲಿ ಕಾಂಗ್ರೆಸ್ ಪಕ್ಷ ಅತಿ ಹೆಚ್ಚು ಪಕ್ಷಾಂತರದಿಂದಾಗಿ ನಲುಗಿದ್ದು, ಶಾಸಕರ ಪಕ್ಷಾಂತರದಿಂದಾಗಿ 405 ಮರು ಚುನಾವಣೆಗಳು ನಡೆದಿವೆ. ಎಡಿಆರ್ ಹೊಸ ವರದಿಯಲ್ಲಿ, 2016-2020ರ ಅವಧಿಯಲ್ಲಿ, ರಾಜಕೀಯ ಪಕ್ಷಗಳನ್ನು ಬದಲಾಯಿಸಿದ ಮಂದಿಯಲ್ಲಿ 405 ಮರು-ಸ್ಪರ್ಧಿಸಿದ ಶಾಸಕರ ಪೈಕಿ 182 ಮಂದಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಇನ್ನು ೩೮ ಮಂಡಿ ಕಾಂಗ್ರೆಸ್ ಗೆ ೨೫ ಶಾಸಕರು ಟಿ.ಆರ್.ಎಸ್ ಗೆ ಸೇರಿದ್ದಾರೆ.
. 2019ರ ಲೋಕಸಭಾ ಚುನಾವಣೆ ವೇಳೆ ಬಿಜೆಪಿ ತೊರೆದು ಬಿಜೆಪಿ ಸೇರಿದ್ದ ಏಳು ರಾಜ್ಯಸಭಾ ಸಂಸದರು 2016-2020ರ ನಡುವೆ ಚುನಾವಣೆ ಎದುರಿಸಲು ಕಾಂಗ್ರೆಸ್ ತೊರೆದು ಬೇರೆ ಪಕ್ಷ ಸೇರಿದ್ದಾರೆ ಎಂದು ವರದಿ ತಿಳಿಸಿದೆ.
2016-2020ರ ನಡುವೆ ನಡೆದ ಚುನಾವಣೆಯಲ್ಲಿ 170 ಶಾಸಕರು ಕಾಂಗ್ರೆಸ್ ತೊರೆದು ಬೇರೆ ಪಕ್ಷ ಸೇರಿದರೆ, ಈ ಅವಧಿಯಲ್ಲಿ ಚುನಾವಣೆಗೆ ಸ್ಪರ್ಧಿಸಲು 18 ಶಾಸಕರು ಮಾತ್ರ ಬಿಜೆಪಿ ಬಿಟ್ಟು ಬೇರೆ ಪಕ್ಷ ಸೇರಿದ್ದಾರೆ. ಮಧ್ಯಪ್ರದೇಶ, ಮಣಿಪುರ, ಗೋವಾ, ಅರುಣಾಚಲ ಪ್ರದೇಶ ಮತ್ತು ಕರ್ನಾಟಕ ರಾಜ್ಯ ವಿಧಾನಸಭೆಗಳಲ್ಲಿ ಇತ್ತೀಚೆಗೆ ಸರ್ಕಾರಗಳ ಪತನಕ್ಕೆ ಅವರ ಶಾಸಕರ ಪಕ್ಷಾಂತರ ಕಾರಣ ಎಂದು ವರದಿ ಹೇಳಿದೆ.