ನವದೆಹಲಿ, ಮಾ.12 (DaijiworldNews/PY): ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಕೇಂದ್ರ ಸರ್ಕಾರ ಮನವಿ ಮಾಡಿದ್ದು, "ಇನ್ನೂ ಕೂಡಾ ಈ ಸಾಂಕ್ರಾಮಿಕ ರೋಗ ಮುಗಿದಿಲ್ಲ, ದೇಶದ ಜನರು ಎಚ್ಚರಿಕೆಯಿಂದ ಹಾಗೂ ಆರೋಗ್ಯಯುತವಾಗಿರಬೇಕು" ಎಂದಿದೆ.
ಎನ್ಐಟಿಐ ಆಯೋಗದ ಸದಸ್ಯ ಡಾ. ಕೆ.ವಿ ಪೌಲ್ ಅವರು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದು, "ಕೊರೊನಾ ನಿಯಂತ್ರಕಣಕ್ಕೆ ಇರುವುದು ಒಂದೇ ಮಾರ್ಗ. ದೆಹಲಿ ಹಾಗೂ ಸುತ್ತಮುತ್ತಲಿನಲ್ಲೂ ಕೊರೊನಾ ತನ್ನ ಕಬಂಧಬಾಹುವನ್ನು ಚಾಚುತ್ತಿದ್ದು, ಜನರು ಜಾಗರೂಕರಾಗಿರಬೇಕು" ಎಂದು ತಿಳಿಸಿದ್ದಾರೆ.
"ಕೊರೊನಾ ವೈರಸ್ ಅಚಾನಕ್ಕಾಗಿ ಬರುವಂತದ್ದು, ಹಾಗಾಗಿ ಇದನ್ನು ಲಘುವಾಗಿ ಪರಿಗಣಿಸಬೇಡಿ. ಈ ವೈರಸ್ನಿಂದ ನಾವು ಮೊದಲು ಮುಕ್ತರಾಗಬೇಕು. ಹಾಗಾಗಿ ನಾವು ಕೊರೊನಾ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು. ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಪ್ರದೇಶಗಳಲ್ಲಿ ಕೊರೊನಾ ಲಸಿಕೆಯನ್ನು ಆದ್ಯತೆಯ ಮೇರೆಗೆ ನೀಡಬೇಕು" ಎಂದಿದ್ದಾರೆ.
ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕರ್ನಾಟಕ, ಮಧ್ಯಪ್ರದೇಶ ಸೇರಿದಂತೆ ಹರಿಯಾಣ, ಕೇರಳ, ಗುಜರಾತ್ನಲ್ಲೂ ಕೊರೊನಾ ಭೀತಿ ಉಂಟಾಗಿದೆ.