ಕಾಕಿನಾಡ,ಮಾ.11 (DaijiworldNews/HR): ರಾಸಾಯನಿಕ ಕಾರ್ಖಾನೆಯೊಂದರಲ್ಲಿ ಸ್ಫೋಟ ಸಂಭವಿಸಿ ಇಬ್ಬರು ಕಾರ್ಮಿಕರು ಮೃತಪಟ್ಟು, ಆರು ಮಂದಿ ಗಾಯಗೊಂಡ ಘಟನೆ ಪೂರ್ವ ಗೋದಾವರಿ ಜಿಲ್ಲೆಯ ಕಾಕಿನಾಡದಲ್ಲಿ ನಡೆದಿದೆ.
ಸಾಂಧರ್ಭಿಕ ಚಿತ್ರ
ರಾಸಾಯನಿಕ ಕೈಗಾರಿಕೆಗಳ ಘಟಕದಲ್ಲಿನ ಶೇಖರಣಾ ಟ್ಯಾಂಕ್ ರಾಸಾಯನಿಕ ಕ್ರಿಯೆಯಿಂದಾಗಿ ಸ್ಫೋಟಗೊಂಡಿದ್ದು, ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಟ್ಯಾಂಕ್ನಲ್ಲಿ ನೈಟ್ರಿಕ್ ಆಮ್ಲ ಮತ್ತಿತರ ರಾಸಾಯನಿಕವನ್ನು ಶೇಖರಣೆ ಮಾಡಲಾಗಿದ್ದು, ಹೆಚ್ಚು ಬಿಸಿಯಾದ ರಾಸಾಯನಿಕದಿಂದಾಗಿ ಸ್ಫೋಟ ಸಂಭವಿಸಿರಬಹುದು ಎಂದು ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ಸಿಎಚ್ ರತ್ನ ಬಾಬು ಹೇಳಿದ್ದಾರೆ.
ಸ್ಫೋಟಕ್ಕೆ ಕಾರಣ ಏನು ಎಂಬುದರ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.