ಬೆಂಗಳೂರು, ಮಾ.11 (DaijiworldNews/PY): "ನನ್ನ ಭಾವನೆಗಳಿಗೆ ಜೆಡಿಎಸ್ನಲ್ಲಿ ಬೆಲೆ ಇರಲಿಲ್ಲ. ಇದಕ್ಕೆ ಕಾಂಗ್ರೆಸ್ ಸೂಕ್ತವಾದ ವೇದಿಕೆಯಾಗಿದ್ದು, ಎಪ್ರಿಲ್ನಲ್ಲಿ ಕಾಂಗ್ರೆಸ್ಗೆ ಸೇರ್ಪಡೆಯಾಗಲಿದ್ದೇನೆ" ಎಂದು ಮಧು ಬಂಗಾರಪ್ಪ ಹೇಳಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ವೇಳೆ ಮಾತನಾಡಿದ ಅವರು, "ನನಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಮೇಲೆ ಅಪಾರವಾದ ಗೌರವ ಇದೆ. ಇಷ್ಟು ದಿನ ಜೆಡಿಎಸ್ನಲ್ಲಿ ಅಧಿಕಾರ ಅನುಭವಿಸಿ ಇದೀಗ ಕಾಂಗ್ರೆಸ್ನತ್ತ ಮುಖ ಮಾಡಿದ್ದಾರೆ ಎಂದು ಮಾಡಿರುವ ಆರೋಪಕ್ಕೆ ಯಾವುದೇ ಹುರುಳಿಲ್ಲ. ನಾನು ಜೆಡಿಎಸ್ನಲ್ಲಿ ಯಾವುದೇ ರೀತಿಯಾದ ಅಧಿಕಾರವನ್ನು ಅನುಭವಿಸಿಲ್ಲ" ಎಂದಿದ್ದಾರೆ.
"ನಾನು ಎಲ್ಲಿಯೇ ಇದ್ದರೂ ಸಹ ದೇವೇಗೌಡ, ಹಾಗೂ ಕುಮಾರಸ್ವಾಮಿ ಅವರನ್ನು ಗೌರವಿಸುತ್ತೇನೆ. ರಾಜಕೀಯದಲ್ಲಿ ಅವರಿಬ್ಬರೂ ಹಿರಿಯರು. ವೈಯುಕ್ತಿವಾಗಿ ಮಧು ಬಂಗಾರಪ್ಪ ಅವರು ಬದಲಾಗುತ್ತಿಲ್ಲ. ಬದಲಾಗಿ ಪಕ್ಷವನ್ನು ಬದಲಾಯಿಸುತ್ತಿದ್ದಾರೆ. ಹೊಸ ಪಕ್ಷ ಹಾಗೂ ಹೊಸ ಅವಕಾಶ ದೊರೆತಿದೆ" ಎಂದು ತಿಳಿಸಿದ್ದಾರೆ.