ಮೈಸೂರು, ಮಾ11 (DaijiworldNews/MS): "ಇಂತಹ ಅದೆಷ್ಟೋ ಸಿಡಿ ಪ್ರಕರಣಗಳು ನಮ್ಮ ಕುಟುಂಬದ ಬಳಿ ಬಂದಿವೆ. ಆದರೆ ಇಂತಹ ಪ್ರಕರಣ ತಂದವರಿಗೆ ಬುದ್ದಿ ಹೇಳಿ ಕಳುಹಿಸಿದ್ದೇವೆ" ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಕುಮಾರಸ್ವಾಮಿ, "ರಾಜಕಾರಣ ಮಾಡಲು ಬೇಕಾದಷ್ಟು ವಿಷಗಳಿವೆ. ಸಿಡಿ ಸಬ್ಜೆಕ್ಟ್ ಗಳನ್ನು ಇಟ್ಟುಕೊಂಡು ರಾಜಕಾರಣ ಮಾಡಬೇಡಿ. ಇಂತಹ ಅದೆಷ್ಟೋ ಸಿಡಿ ಪ್ರಕರಣಗಳು ನಮ್ಮ ಕುಟುಂಬದ ಬಳಿ ಬಂದಿವೆ. ಇಂತಹ ಪ್ರಕರಣ ತಂದವರಿಗೆ ಬುದ್ದಿ ಹೇಳಿ ಕಳುಹಿಸಿದ್ದೇವೆ" ಎಂದು ಸ್ಪಷ್ಟಪಡಿಸಿದರು.
"ಭಯಪಟ್ಟು ಕೋರ್ಟ್'ಗೆ ಹೋದ ಆರು ಸಚಿವರು ಬಹಳ ಮೇದಾವಿಗಳು. ಯಾಕೆ ಹೋಗಬೇಕಿತ್ತು..ಅಷ್ಟೊಂದು ಆತಂಕದಲ್ಲಿ ಯಾಕೆ ಹೋದರು. ಅಂತಹ ಪ್ರಕರಣದಲ್ಲಿ ಸಿಲುಕಿಕೊಳ್ಳದಿದ್ದರೆ ಯಾಕೆ ನ್ಯಾಯಲಯ ಮೆಟ್ಟಿಲೇರಬೇಕಿತ್ತು. ತಮ್ಮ ಮುಖಕ್ಕೆ ತಾವೇ ಮಸಿ ಬಳಿದುಕೊಂಡಿದ್ದಾರೆ. ರಕ್ಷಣೆ ಕೋಡಿ ಎಂದು ಈ ಸರ್ಕಾರದ ಸಚಿವರೇ ಕೋರ್ಟ್ ಮೆಟ್ಟಿಲೇರಿದ್ರೆ, ಇನ್ನು ಜನಸಮಾನ್ಯರಿಗೆ ಸಚಿವರು ಯಾವ ರಕ್ಷಣೆ ಕೊಡುತ್ತಾರೆ" ಎಂದು ಪ್ರಶ್ನಿಸಿದರು.
ಮುಂದುವರಿಸಿ ಮಾತನಾಡಿದ ಅವರು "ಸದನಕ್ಕೆ ಹೋಗೋದ್ರಿಂದ ಉಪಯೋಗ ಇಲ್ಲ. ಸದನದಲ್ಲಿ ಉತ್ತಮ ಚರ್ಚೆಯೇ ನಡೆಯುತ್ತಿಲ್ಲ. ಆ ವಿಪಕ್ಷದವರು ಸಮಯ ಹಾಳು ಮಾಡ್ತಾರೆ. ಒಬ್ಬ ಶರ್ಟ್ ಬಿಚ್ಚಿದ್ದಕ್ಕೆ ಒಂದು ದಿನ ಹಾಳಾಯ್ತು. ಮತ್ತೊಂದು ದಿನ ಒಂದು ದೇಶ, ಒಂದೇ ಚುನಾವಣೆ ಬಗ್ಗೆ ಚರ್ಚೆ ವೇಳೆಯೂ ಒಂದು ದಿನ ಹಾಳು. ಟಿಎ, ಡಿಎಗಾಗಿ ಸದನಕ್ಕೆ ಹೋಗಬೇಕಾ.? ಅದಕ್ಕಿಂತ ಟಿವಿಯಲ್ಲೇ ಸದನದ ಚರ್ಚೆಯನ್ನು ನೋಡಬಹುದು" ಎಂದರು.